ದೊಡ್ಡಕೊಪ್ಪಲು ಗ್ರಾಮದಲ್ಲಿ ಮಕ್ಕಳಿಗೆ ಪ್ರಾಧ್ಯಾಪಕ ಪ್ರೊ. ಪರಶುರಾಮ್ ಲೇಖನ ಸಾಮಗ್ರಿ ವಿತರಿಸಿದರು.
ಸಾಲಿಗ್ರಾಮ: ಗ್ರಾಮೀಣ ಮಕ್ಕಳ ಓದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಯುವರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಸಿ.ಡಿ.ಪರುಶುರಾಮ ಅವರ ಕಾಳಜಿ ಶ್ಲಾಘನೀಯ ಎಂದು ಹೆಬ್ಬಾಳು ಗ್ರಾ.ಪಂ.ಸದಸ್ಯ ವೆಂಕಟರಾಮು ಹೇಳಿದರು.
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ದೇವೇಗೌಡ ವಾಚನಾಲಯದಲ್ಲಿ ಚಿಕ್ಕಕೊಪ್ಪಲು-ದೊಡ್ಡಕೊಪ್ಪಲು ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಲೇಖನ ಸಾಮಾಗ್ರಿ ವಿತರಿಸಿ ಮಾತನಾಡಿದರು.
ಹುಟ್ಟೂರಿನ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದರ ಮೂಲಕ ಉನ್ನತ ಹುದ್ದೆಗೆ ಹೋಗಬೇಕು ಎಂದು ಒತ್ತಾಸೆ ಇಟ್ಟುಕೊಂಡಿರುವ ಪರುಶುರಾಮ್ ಅವರು ತಮ್ಮ ಗ್ರಾಮದಲ್ಲಿ ಗ್ರಂಥಾಲಯ ಮತ್ತು ವಾಚನಾಲಯದ ಜತೆಗೆ ಇಂಗ್ಲಿಷ್ ಕೋಚಿಂಗ್ ಸೆಂಟರ್ ಅನ್ನು ಆರಂಭಿಸಿ ಉಚಿತ ಬೋಧನೆ ಮಾಡುತ್ತಿದ್ದು, ಭೇರ್ಯ, ಸಾಲಿಗ್ರಾಮ ಅವಳಿ ಗ್ರಾಮದ ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರೊ.ಸಿ.ಡಿ.ಪರುಶುರಾಮ್, ಶಿಕ್ಷಕಿ ಶೀಲಾ, ಗ್ರಂಥಾಲಯದ ಮೇಲ್ವಿಚಾರಕಿ ಸುಮಿತ್ರಾ, ಮುಖಂಡ ಹೆಬ್ಬಾಳು ನವೀನ್, ರಾವಂದೂರು ಮುಕುಂದ ಇದ್ದರು.