ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜಿನ ಆವರಣದಲ್ಲಿ 77ನೇ ಗಣರಾಜ್ಯೋತ್ಸವದ ನಿಮಿತ್ತ ಕಾಲೇಜಿನ ಸಿಬಿಸಿ ಅಧ್ಯಕ್ಷ ಜಯಂತ್ ಹಾಗೂ ಕೆಪಿಎಸ್ ಪ್ರೌಢಶಾಲೆಯ ಅಧ್ಯಕ್ಷ ಎಂ.ರಂಗಸ್ವಾಮಿ ಧ್ವಜಾರೋಹಣ ನೆರವೇರಿಸಿದರು. 
ಮೈಸೂರು

ಪಬ್ಲಿಕ್ ಶಾಲೆಯಲ್ಲಿ ಧ್ವಜಾರೋಹಣ

ಲೋಕೇಶ್ ಮನು. ಡಿ
ಮೂಗೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜಿನ ಆವರಣದಲ್ಲಿ 77ನೇ ಗಣರಾಜ್ಯೋತ್ಸವದ ನಿಮಿತ್ತ ಕಾಲೇಜಿನ ಸಿಬಿಸಿ ಅಧ್ಯಕ್ಷ ಜಯಂತ್ ಹಾಗೂ ಕೆಪಿಎಸ್ ಪ್ರೌಢಶಾಲೆಯ ಅಧ್ಯಕ್ಷ ಎಂ.ರಂಗಸ್ವಾಮಿ ಧ್ವಜಾರೋಹಣ ನೆರವೇರಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆ ಕಾಲೇಜು ವಿಭಾಗದ ಉಪನ್ಯಾಸಕ ನಾಗಸ್ವಾಮಿ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಪಾಂಡಿತ್ಯ ಹಾಗೂ ಆಳವಾದ ಅಧ್ಯಾಯನದಿಂದ ಕತ್ತಲಲ್ಲಿ ಮುಳುಗಿದ್ದ ನಮ್ಮ ದೇಶಕ್ಕೆ ಸಂವಿಧಾನದ ಬೆಳಕು ನೀಡಿ ಅದ್ಭುತವಾದ ಸಂವಿಧಾನ ನೀಡಿ ಅಜರಾಮರವಾಗಿದ್ದಾರೆ. ಇಂದಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ವಿಚಾರಗಳು ಮತ್ತು ಸಂವಿಧಾನದ ಎಲ್ಲ ವಿಚಾರಗಳನ್ನು ಓದಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಕಟ್ಟಿ ಕೊಳ್ಳಬೇಕು ಎಂದರು.
ಕೆಪಿಎಸ್ ಪ್ರೌಢಶಾಲೆಯ ಉಪಪ್ರಾಂಶುಪಾಲ ಸಿ.ಪುಟ್ಟಸ್ವಾಮಿ ಮಾತನಾಡಿ, ನಮ್ಮ ದೇಶ ಉತ್ತಮ ಸಂವಿಧಾನ ಹೊಂದಿರುವುದರಿಂದ ಸದೃಢ ದೇಶವಾಗಿ ರೂಪುಗೊಂಡಿದೆ. ರಾಷ್ಟ್ರದ ಎಲ್ಲ ಸಮಸ್ತ ಪ್ರಜೆಗಳಿಗೂ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ದೊರಕಿಸಿಕೊಡುವ ಮೂಲಕ ಭಾರತ ಸಂಪನ್ನತೆ ಹೊಂದಿದೆ. ಭವ್ಯ ಭಾರತ ನಿರ್ಮಾಣದ ಕನಸು ನನಸು ಹೊಂದಿರುವ ವಿದ್ಯಾರ್ಥಿಗಳು ಮುಂದೆ ಉತ್ತಮ ಪ್ರಜೆಗಳಾಗಿ ರೂಪುಗೊಂಡು ದೇಶಕ್ಕೆ ಉತ್ತಮ ಕೊಡುಗೆ ನೀಡಲು ಮುಂದಾಗಬೇಕು ಎಂದರು.
ಕಾಲೇಜು ಪ್ರಾಂಶುಪಾಲ ರಾಚಯ್ಯ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಪರಶಿವಮೂರ್ತಿ, ನಾಗರಾಜು, ಹಿರಿಯ ಉಪನ್ಯಾಸಕರಾದ ಪುಟ್ಟರಸ, ರಾಜೇಶ್, ನಾಗರಾಜ್, ಧನಶೆಲ್ವಿ, ಶ್ರುತಿ, ಅಶ್ವಿನಿ, ಕೇಶವ್, ಶಾಂತಮ್ಮ, ಮಹದೇವ್, ರಮೇಶ್, ಆನಂದ್, ರಂಗಯ್ಯ, ಚಂದ್ರಪ್ರಭಾ, ನಿರ್ಮಲಾ, ಅಧ್ಯಾಪಕರು, ಉಪನ್ಯಾಸಕರು ಇದ್ದರು.