ಸಂಗೀತ ಕಾರ್ಯಕ್ರಮ  
ಮೈಸೂರು

ಫೆ.1ರಂದು ಸಂಗೀತ ಕಾರ್ಯಕ್ರಮ

ಮೈಸೂರು: ಸ್ವರಸಂಕುಲ ಸಂಗೀತ ಸಭಾ ವತಿಯಿಂದ ಫೆ.1ರಂದು ಉದಯೋನ್ಮುಖ ಹಿಂದೂಸ್ತಾನಿ ಪಿಟೀಲು ಕಲಾವಿದ ಪ್ರಚೇತ್ ರಾಮ್ ಕಜೆ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಲೇಔಟ್‌ನ ಪಂಡಿತ್ ವೀರಭದ್ರಯ್ಯ ಹಿರೇಮಠ ಅವರ ಮನೆಯಲ್ಲಿ ಅಂದು ಸಂಜೆ 6.30 ಕಾರ್ಯಕ್ರಮ ನಡೆಯಲಿದೆ. ಅವರಿಗೆ ತಬಲಾದಲ್ಲಿ ಪಂಡಿತ್ ರಮೇಶ್ ದನ್ನೂರ್ ಸಹಕಾರ ನೀಡಲಿದ್ದಾರೆ ಎಂದು ಸ್ವರಸಂಕುಲ ಸಂಗೀತ ಸಭಾದ ಕಾರ್ಯದರ್ಶಿ ಡಾ.ಎಂ ಎಸ್ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.