ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷೆ ಡಾ.ಟಿ.ಎಸ್.ಸತ್ಯವತಿಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಡಾ.ಸಿ.ಎ.ಶ್ರೀಧರ್ ಹಾಗೂ ಇತರರು ಇದ್ದರು.
- ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್‌ನಿಂದ ಸಂಗೀತ ಸಮ್ಮೇಳನ ಆಯೋಜನೆ
- ಡಾ.ಟಿ.ಎಸ್.ಸತ್ಯವತಿ ಅವರಿಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ
ಮೈಸೂರು: ಮನಸ್ಸಿನ ಒತ್ತಡ ದೂರ ಮಾಡಲು ಹಾಗೂ ದುಖಃವಾದಾಗ ಮನ ಪರಿವರ್ತನೆಗೊಳಿಸಲು ಸಂಗೀತ ಎಂಬುದು ಸಿದ್ಧೌಷಧ ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಐದು ದಿನಗಳ ಕಾಲ ಆಯೋಜಿಸಿದ್ದ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಂಗೀತವೂ ಮನಸ್ಸುಗಳಿಗೆ ಸಾಂತ್ವನಗಳನ್ನು ಹೇಳುತ್ತದೆ. ಭಾರತವು ಜಗತ್ತಿಗೆ ಸಂಗೀತ, ನೃತ್ಯ, ಕಲೆ, ಪರಂಪರೆಗಳ ಮೂಲಕ ಉತ್ತಮ ಕೊಡುಗೆ ನೀಡಿದೆ ಎಂದರು.
ವಿದೇಶದಲ್ಲಿ ನೆಲೆಸಿರುವ ಭಾರತೀಯರು ದೇಶದ ಕಲೆ, ಸಂಸ್ಕೃತಿ, ಸಂಗೀತದ ಮಹತ್ವವನ್ನು ಹೆಚ್ಚು ಸಾರಿ ವಿದೇಶಿಯರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇದು ಭಾರತೀಯರು ಹೆಮ್ಮೆ ಪಡುವ ಸಂಗತಿ. ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿ ಬೆಳೆಸಬೇಕು. ಸಂಗೀತ ವಿದ್ವಂಸರಾಗುವುದು ತಪ್ಪಸ್ಸು. ಇಡೀ ಬದುಕನ್ನೇ ಸಂಗೀತಕ್ಕೆ ಸಮರ್ಪಿಸುವುದು ಸುಲಭವಲ್ಲ ಎಂದು ಹೇಳಿದರು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸಿ.ಎ.ಶ್ರೀಧರ್ ಮಾತನಾಡಿ, ಹೃದಂು ಮತ್ತು ಬುದ್ಧಿ ಪ್ರಚೋದಕವಾದ ಗೋಷ್ಠಿಗಳು ಸಂಗೀತಾಸ್ತರನ್ನು ಚಿಂತನಶೀಲರನ್ನಾಗಿ ವಾಡಿದೆ. ಕಾಲಾವಕಾಶ ಕಡಿಮೆ ಇದ್ದರು ಬಹು ವಿದ್ವತ್ ಪೂರ್ಣವಾಗಿ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಜೆಎಸ್‌ಸ್ ಸಂಗೀತ ಸಂಗೀತ ಎನ್ನುವುದು ಮಹಾನ್ ಮಾರ್ಗದರ್ಶನವಾಗಿ ಬೆಳೆದು ಬಂದಿದೆ. ರಾಜಾಶ್ರಂುದ ನಂತರ ಸುತ್ತೂರು ಪರಂಪರೆ ಸಂಗೀತ ಪರಂಪರೆ ಬೆಳೆಸುವ ಕೆಲಸ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಸಮ್ಮೇಳನಾಧ್ಯಕ್ಷೆ ಡಾ.ಟಿ.ಎಸ್.ಸತ್ಯವತಿ ಅವರಿಗೆ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಮಾತನಾಡಿದ ಅವರು, ಉದಾತ್ತ ಭಾವನೆಯಿಂದ ಇನ್ನೊಬ್ಬರನ್ನು ಕಾಣಬೇಕು ಎಂಬುದನ್ನು ಸುತ್ತೂರು ಮಠ ಕಲಿಸಲಿದೆ. ನಡೆ ನುಡಿ ಒಂದಾಗಿರುವ ಅಪರೂಪದ ಸಂಗಮ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಎಂದು ಬಣ್ಣಿಸಿದರು.
ವಿಜೇತರ ವಿವರ: ವಚನ ಗಾಯನ ಸೀನಿಯರ್ ವಿಭಾಗದಲ್ಲಿ ಅಂಜನಾ ಮಠಂ (ಪ್ರ), ಎ.ಜಿ.ಪುನೀತ್ (ದ್ವಿ), ವಚನ ಗಾಯನ ಜೂನಿಯರ್ ವಿಭಾಗದಲ್ಲಿ ಚಾರ್ವಿ ಸತೀಶ್ (ಪ್ರ), ಎನ್.ವಿಧಾತ್ರಿ (ದ್ವಿ), ಶಾಸ್ತ್ರೀಯ ಸಂಗೀತ ಸೀನಿಯರ್ ವಿಭಾಗದಲ್ಲಿ ಅಂಜನಾ ಮಠಂ (ಪ್ರ), ಅನಘಾ ಭಾರಧ್ವಾಜ್ (ದ್ವಿ), ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಲಲಿತ ಶ್ರೀರಾಮ್ (ಪ್ರ), ಶ್ರೀಹಾನ್ ಸುಹಾಸ್ ಕರ್ವೆ (ದ್ವಿ), ಶಾಸ್ತ್ರೀಯ ವಾದ್ಯ ಸಂಗೀತ ವಯೋಲಿನ್ ಸೀನಿಯರ್ ವಿಭಾಗದಲ್ಲಿ ಎ.ಜಿ.ಪುನೀತ್ (ಪ್ರ), ಪಿ.ಎಸ್.ಶೃತ (ದ್ವಿ), ಜೂನಿಯರ್ ವಿಭಾಗದಲ್ಲಿ ಲಲಿತ ಶ್ರೀರಾಮ್ (ಪ್ರ), ವಿ.ಸಮರ್ಥ್ (ದ್ವಿ), ಶಾಸ್ತ್ರೀಯ ವಾದ್ಯ ಸಂಗೀತ-ವೀಣೆ ಜೂನಿಯರ್ ವಿಭಾಗದಲ್ಲಿ ಶ್ರೀರಂಗ ವಿ.ಚಕ್ರವರ್ತಿ (ಪ್ರ), ಎಂ.ಬಿ.ರಾಘವಿ (ದ್ವಿ), ಕೊಳಲು ಜೂನಿಯರ್ ವಿಭಾಗದಲ್ಲಿ ಬಿ.ಓಂಕಾರ್ (ಪ್ರ), ಮೃದಂಗ ಜೂನಿಯರ್ ವಿಭಾಗದಲ್ಲಿ ಕೆ.ಪ್ರಹಲ್ಲಾದ್ ದಾಸ್ (ಪ್ರ), ನಿರುಪಮ ದಿವಾಕರ್ (ದ್ವಿ) ಬಹುಮಾನ ಪಡೆದರು.