. ಯುಗಾದಿ ಹಬ್ಬದ ಅಂಗವಾಗಿ ಶ್ರೀ ರಾಕಸಮ್ಮ ನ ರಥೋತ್ಸವ ಗುರುವಾರ ಸಂಜೆ ಗ್ರಾಮದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತ್ತು
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ರಾಕಸಮ್ಮನ ದೇಗುಲದಿಂದ ರಥ ಸಾಗುವ ದಾರಿಯುದ್ದಕ್ಕೂ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು
ಅಂದು ಬೆಳಿಗ್ಗಿನ ಜಾವ ದೇವಾಲಯದಲ್ಲಿ ಅಮ್ಮ ನವರಿಗೆ ಅಭಿಷೇಕದ ವಿಶೇಷ ಪೂಜೆಗಳು ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನೇರವೇರಿದವು ರಥೋತ್ಸವದ ನಿಮಿತ್ತ ಶ್ರೀ ರಾಕಸಮ್ಮನವರಿಗೆ ದೇಗುಲದಲ್ಲಿ ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು ಅಮ್ಮ ನವರ ಉತ್ಸವ ಮೂರ್ತಿಗೆ ಕಾವೇರಿ ಕಪಿಲಾ ನದಿಯ ದಡದಲ್ಲಿ ಹೋಮ ನಡೆಸಿ ಪೂಜೆ ಸಲ್ಲಿಸಿದ ಬಳಿಕ ಅಮ್ಮ ನವರನ್ನು ರಥದಲ್ಲಿ ಪ್ರತಿಷ್ಟಾಪಿಸಿ ವಿವಿಧ ಬಗೆಯ ಹೂವಿನಿಂದ ಅಲಂಕಾರಿಸಿ ರಾತ್ರಿ 9 ಗಂಟೆಯ ನಂತರ ವಿಶೇಷ ಪೂಜೆಯೊಂದಿಗೆ ರಥೋತ್ಸವಕ್ಕೆ ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಸಹಸ್ರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದಾರಿಯುದ್ದಕ್ಕೂ ಹರಕೆ ಪೂಜೆ ಸಲ್ಲಿಸಿ ನಮಿಸಿದರು.ಯುವ ಸಮೂಹ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶ್ರೀ ರಾಕಸಮ್ಮನ ರಥೋತ್ಸವವು ಸ್ವಸ್ಥಾನಕ್ಕೆ ತಲುಪಿತು ಈ ವೇಳೆ ದೇವಾಲಯದ ಬಳಿ ಅಲ್ಲಲ್ಲಿ ಭಕ್ತರಿಂದ ಪ್ರಸಾದ ವಿನಿಯೋಗ ನಡೆಯಿತು.
ಶ್ರೀ ವೀರಭದ್ರೇಶ್ವರ ಸ್ವಾಮಿ ಉತ್ಸವ : ಪ್ರತಿವರ್ಷದಂತೆ ಈ ಬಾರಿಯೂ ಯುಗಾದಿ ಹಬ್ಬದ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ಹುಲಿ ವಾಹನ ಉತ್ಸವವು ಬಸವನ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉತ್ಸವ ಸಾಗಿತು. ದೇವಾಲಯದ ಬಳಿ ಪ್ರಸಾದ ವಿತರಿಸಿದರು ಈ ವೇಳೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.