- ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜನೆ
ಮೈಸೂರು: ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮುದ್ದುರಾಮ ಬಳಗದ ಸಹಯೋಗದಲ್ಲಿ ‘ಕೆಸಿಎಸ್ ಕಾವ್ಯ ಕುತೂಹಲ’ ವಿಚಾರಸಂಕಿರಣವನ್ನು ಮೇ 13ರಂದು ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ವಿಚಾರಸಂಕಿರಣವನ್ನು ಬೆಳಗ್ಗೆ 10.15ಕ್ಕೆ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಉದ್ಘಾಟಿಸಲಿದ್ದಾರೆ. ಎಚ್‌ಎಂಟಿ ನಿವೃತ್ತ ಅಧ್ಯಕ್ಷ ಎನ್.ರಾಮಾನುಜ ಭಾಗವಹಿಸಲಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ ಅಧ್ಯಕ್ಷತೆ ವಹಿಸಲಿದ್ದು, ಮುದ್ದುರಾಮ ಬಳಗದ ಉಪಾಧ್ಯಕ್ಷ ಡಾ.ನೀಲಗಿರಿ ತಳವಾರ ಆಶಯ ನುಡಿಯಾಡಲಿದ್ದಾರೆ.
ಬೆಳಗ್ಗೆ 11.30ಕ್ಕೆ ‘ಭಾವಲಹರಿ’ ಗೋಷ್ಠಿ-1 ನಡೆಯಲಿದ್ದು, ವಿಶ್ರಾಂತ ಕುಲಪತಿ ಡಾ.ಪದ್ಮಾ ಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿಗಳಾದ ಡಾ.ಸಿ.ನಾಗಣ್ಣ ‘ಪ್ರಕೃತಿ’ ವಿಷಯ ಕುರಿತು, ಡಾ.ಎಂ.ಎನ್.ನಂದೀಶ್ ಹಂಚೆ ‘ಒಲುಮೆ’ ಕುರಿತು ಹಾಗೂ ಮುಕ್ತ ವಿವಿಯ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ‘ಆಧ್ಯಾತ್ಮ’ ಕುರಿತು ಮಾತನಾಡಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ‘ಮುದ್ದುರಾಮ ಮಂಜರಿ’ ಗೋಷ್ಠಿ-2 ನಡೆಯಲಿದೆ. ಚಿಂತಕ ಡಾ.ಎಚ್.ವಿ.ನಾಗರಾಜ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ‘ಜೀವನ ಮೌಲ್ಯ’ ಕುರಿತು ಪ್ರಾಧ್ಯಾಪಕ ಡಾ.ಎಚ್.ಬಿ.ಬೆಟ್ಟಸ್ವಾಮಿ, ‘ಕಲಾಭಿವ್ಯಕ್ತಿ’ ಕುರಿತು ಜೆಎಸ್‌ಎಸ್ ವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಮೊರಬದ ಮಲ್ಲಿಕಾರ್ಜುನ ಹಾಗೂ ‘ಭಾಷಿಕ ವಿನ್ಯಾಸ’ ಕುರಿತು ಪ್ರಾಧ್ಯಾಪಕ ಡಾ. ಬಿ.ವಿ.ವಸಂತಕುಮಾರ್ ಮಾತನಾಡಲಿದ್ದಾರೆ. ಸಂಜೆ 4.30ಕ್ಕೆ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಲಿದೆ. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.