ಚಿನ್ನಾಭರಣ ವಂಚನೆ 
ಮೈಸೂರು

ಅಡವಿಟ್ಟ ಚಿನ್ನ ವಂಚನೆ

ಅವಿನಾಶ್ ಜೈನಹಳ್ಳಿ
ಮೈಸೂರು: ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳುತ್ತೇವೆ ಎಂದು ಹೇಳಿದ ಹಣಕಾಸು ಸಂಸ್ಥೆಯ ಮಾಲೀಕ 1.93 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದು, ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಫೈನಾನ್ಸ್‌ನಲ್ಲಿ 1.93 ಲಕ್ಷ ರೂ. ಗಳಿಗೆ 53.08 ಗ್ರಾಂ ಚಿನ್ನಾಭರಣವನ್ನು ಅಡವಿಟ್ಟಿದ್ದು, ನೀವು ಇಟ್ಟಿರುವ ಚಿನ್ನಾಭರಣವನ್ನು ಬಿಡಿಸಿಕೊಡುವುದರೊಂದಿಗೆ ಹೆಚ್ಚುವರಿ ಹಣವನ್ನು ಕೊಡುತ್ತೇವೆ ಎಂದು ಹೇಳಿ ಚಿನ್ನಾಭರಣ ಬಿಡಿಸಿ ತಮ್ಮ ಬಳಿ ಇಟ್ಟುಕೊಂಡಿದ್ದ. ಈಗ ಚಿನ್ನಾಭರಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಮಹಿಳೆಯು ಹಣಕಾಸು ಸಂಸ್ಥೆಯ ಮಾಲೀಕನ ವಿರುದ್ಧ ದೂರು ನೀಡಿದ್ದಾರೆ.