ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ಜಯಮ್ಮ ಇದ್ದರು.  
ಮೈಸೂರು

ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಧ್ರುವನಾರಾಯಣ ಭರವಸೆ
ನಂಜನಗೂಡು: ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಕೋಟಿ ರೂ. ಅನುದಾನ ನೀಡಿದ್ದು, ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.
ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಶನಿವಾರ ನೂತನ ನಿರ್ಮಾಣವಾಗಿರುವ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. 2020-21ನೇ ಸಾಲಿನಲ್ಲಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ನರೇಗಾ ಯೋಜನೆ ಅಡಿ ಆರಂಭದಲ್ಲಿ 13 ಲಕ್ಷ ರೂ. ಹಣ ಮಂಜೂರಾಗಿತ್ತು. ಕಟ್ಟಡದ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 7ಲಕ್ಷ ರೂ. ಹಣವನ್ನು ಪಂಚಾಯಿತಿಯ 15ನೇ ಹಣಕಾಸಿನ ಅನುದಾನದಡಿ ಬಿಡುಗಡೆ ಮಾಡಿ ಕಟ್ಟಡವನ್ನು ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹೆಮ್ಮರಗಾಲ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾಗಿ 90 ಲಕ್ಷ ರೂ. ಅನುದಾನವನ್ನು ನೀಡಲಾಗಿದ್ದು ಪ್ರಗತಿ ಕೆಲಸಗಳು ನಡೆಯುತ್ತಿವೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಪಂ ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ಜಯಮ್ಮ, ಇಒ ಜೆರಾಲ್ಡ್ ರಾಜೇಶ್, ಬ್ಲಾಕ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲತಾ ಸಿದ್ದಶೆಟ್ಟಿ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸೋಮಣ್ಣ, ಮುದ್ದುಮಾದ ಶೆಟ್ಟಿ, ಸಿದ್ದಶೆಟ್ಟಿ, ದೊರೆಸ್ವಾಮಿ ನಾಯಕ, ಶಿವಕುಮಾರ್, ವಿಜಯಕುಮಾರ್, ಸಿದ್ದರಾಜು, ಪಟೇಲ್ ಶಂಕರಪ್ಪ, ಗೌಡಕೆ ಮಹಾದೇವಪ್ಪ, ಸದಸ್ಯರಾದ ಅಂಬಿಕಾ, ಪುಟ್ಟಸ್ವಾಮಿ ನಾಯಕ, ಪುರುಷೋತ್ತಮ್, ಮಲ್ಲನಾಯಕ, ಮಹಾದೇವಮ್ಮ, ಶಿವು, ಮಾದಪ್ಪ, ಶೀಲಾ ನಾರಾಯಣ್, ಪ್ರಶಾಂತ್, ಭಾಗ್ಯಾ, ಗೀತಾ, ಜ್ಯೋತಿ, ರವಿಕುಮಾರ್, ಗೌರಮ್ಮ, ನಾಗರಾಜು, ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಾಚಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.