ಮೈಸೂರು ವಿವಿಯ ಎಂ.ಕಾಂ ಪರೀಕ್ಷೆಯಲ್ಲಿ 7 ಚಿನ್ನ, 2 ನಗದು ಬಹುಮಾನ ಪಡೆದ ಸುಮಲತಾ ಅವರನ್ನು ಶ್ರೀಕಾಂತ ಶಿಕ್ಷಣ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಟಿ.ಎಸ್. ಶ್ರೀವತ್ಸ, ಪ್ರದೀಪ್‌ಕುಮಾರ್, ಎ.ಜಿ.ರಘು, ಕೆ.ಆರ್.ಸಂತಾನಂ ಇತರರು ಇದ್ದರು
ಮೈಸೂರು:ಖಿಲ್ಲೆ ಮೊಹಲ್ಲಾದ ಶ್ರೀಕಾಂತ ಪ್ರೌಢ, ಪ್ರಾಥಮಿಕ ಹಾಗೂ ಸಂಸ್ಕೃತ ಪಾಠಶಾಲಾ ವಾರ್ಷಿಕೋತ್ಸವವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮಕ್ಕಳು ಕೇವಲ ಇಂಜಿನಿಯರ್, ವೈದ್ಯರಾಗಿ ಹೊರಹೊಮ್ಮಿದರೆ ಸಾಲದು. ಜತೆಗೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ರಾಯಭಾರಿಗಳಾಗಬೇಕು. ಇದಕ್ಕೆ ಪಾಲಕರ ಸಹಕಾರವೂ ಅತ್ಯಗತ್ಯ ಎಂದು ಹೇಳಿದರು.
ಮೈಸೂರಿನಲ್ಲಿ ಇತರ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕ ವಿದ್ಯಾರ್ಥಿ ಇದ್ದಾರೆ. ಗಣಪತಿ ಸಚ್ಚಿದಾನಂದ ಆಶ್ರಮ, ಜೆಎಸ್‌ಎಸ್ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ನೂರಾರು ಮಕ್ಕಳು ಸಂಸ್ಕೃತ ವೇದಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ತಮಗೆ ಹೆಮ್ಮೆಯ ವಿಷಯ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ಪ್ರದೀಪ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿನ ಕಾರ್ಯದರ್ಶಿ ಎ.ಜಿ.ರಘು, ಟ್ರಸ್ಟಿನ ಮಾರ್ಗದರ್ಶಿ ಕೆ.ಆರ್.ಸಂತಾನಂ, ಟ್ರಸ್ಟಿನ ಇತರ ಪದಾಧಿಕಾರಿಗಳು, ಸದಸ್ಯರು, ಎಲ್ಲ ವಿಭಾಗದ ಮುಖ್ಯಸ್ಥರು ಇದ್ದರು.
ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ವಿಷಯವಾರು ಉನ್ನತ ಶ್ರೇಣಿ ಅಂಕ ಪಡೆದ ಮಕ್ಕಳಿಗೆ ರಚನಾ ನಾಗೇಶ್ ಬಹುಮಾನ ವಿತರಿಸಿದರು. ಸಂಸ್ಥೆಯ 8ನೇ ತರಗತಿಯಿಂದ ಪದವಿಯವರೆಗೆ ವ್ಯಾಸಂಗ ಮಾಡಿ ನಂತರ ಮಾನಸಗಂಗೋತ್ರಿಯಲ್ಲಿ ಎಂ.ಕಾಂ. ಪರೀಕ್ಷೆಯಲ್ಲಿ 7 ಚಿನ್ನದ ಪದಕ, 2 ನಗದು ಬಹುಮಾನವನ್ನು ಪಡೆದ ಸುಮಲತಾ ಅವರನ್ನು ಟ್ರಸ್ಟ್‌ನಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.