ವಿವಿಧ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡರಿಂದ ಗುದ್ದಲಿ ಪೂಜೆ 
ಮೈಸೂರು

ವಿವಿಧ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡರಿಂದ ಗುದ್ದಲಿ ಪೂಜೆ

ಅವಿನಾಶ್ ಜೈನಹಳ್ಳಿ
ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-4ರ ವ್ಯಾಪ್ತಿಯ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2.0 ಅನುದಾನದಲ್ಲಿ ಒಟ್ಟು 15.50 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಾಸಕರಾದ ಕೆ. ಹರೀಶ್ ಗೌಡ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ವಾರ್ಡ್ ನಂ 21ರ ಚದುರಂಗ ರಸ್ತೆಯಲ್ಲಿ (ಜೆ.ಸಿ ಕಾಲೇಜು ರಸ್ತೆ) ಹುಣಸೂರು ರಸ್ತೆಯಿಂದ ಬೋಗಾದಿ ರಸ್ತೆಯವರೆಗೆ 12.50 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗೆ ದಿವಂಗತ ಶಂಕರನಾಗ್ ವೃತ್ತದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ನಂತರ 10 ಗಂಟೆಗೆ ವಾರ್ಡ್ ನಂ 6 ರ ನಂದಗೋಕುಲ ಬಡಾವಣೆಯಲ್ಲಿ 3 ಕೋಟಿ ವೆಚ್ಚದಲ್ಲಿ ಅಡ್ಡರಸ್ತೆಗಳಲ್ಲಿ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ, ಇ.ಡಬ್ಲ್ಯೂ.ಎಸ್ ಬಡಾವಣೆ ರಸ್ತೆಗಳಲ್ಲಿ ಚರಂಡಿ ಹಾಗೂ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2.0 ರಡಿಯಲ್ಲಿ ಮೈಸೂರು ನಗರಕ್ಕೆ 250 ಕೋಟಿಗಳ ಅನುದಾನ ಬಂದಿದ್ದು, ಈ ಪೈಕಿ ಚಾಮರಾಜ ಕ್ಷೇತ್ರಕ್ಕೆ 85 ಕೋಟಿ ರೂ ಗಳು ನೀಡಿದ್ದು, ಚಾಮರಾಜ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಗುಣಮಟ್ಟದ ರಸ್ತೆ ಮತ್ತು ಶಾಶ್ವತವಾಗಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವಾರ್ಡ್ ವಾರು ಸಭೆ ನಡೆಸಿ ಸ್ಥಳೀಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಕೈಗೊಳ್ಳುತ್ತಿದ್ದು ಕನಿಷ್ಠ 20 ವರ್ಷಗಳು ಕಾಮಗಾರಿ ಶಾಶ್ವತವಾಗಿರಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಿಂಧು, ಶ್ರೀನಿವಾಸ್, ಇಂಜಿನಿಯರ್ಗಳಾದ ರಾಮಣ್ಣ ಹಾಗೂ ಸಿದ್ದರಾಮೇಶ್, ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಮಾಜಿ ನಗರ ಪಾಲಿಕೆ ಸದಸ್ಯರಾದ ಜೆ.ಗೋಪಿ, ಮುಖಂಡರಾದ ಭಾಸ್ಕರ್ ಗೌಡ, ಶ್ರೀನಿವಾಸ್, ಸುಧೀರ್, ಟೆಂಟ್ ಶ್ರೀನಿವಾಸ್, ಮೈಸೂರು ವಿ.ವಿ.ಸಿಂಡಿಕೇಟ್ ಸದಸ್ಯರಾದ ಮಹದೇಶ್, ಇಂದಿರಾ ಗಾಂಧಿ ಬ್ಲಾಕ್ ಕಾರ್ಯದರ್ಶಿಯಾದ ರಾಮಚಂದ್ರು, ರವಿ ಪೂಜು, ರಾಜಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿಶಾಂತ್ ಪಟೇಲ್, ವಾರ್ಡ್ ಅಧ್ಯಕ್ಷರಾದ ದಿನೇಶ್, ಗಿರಿಜಾಂಬ, ಬ್ಲಾಕ್ ಅಧ್ಯಕ್ಷರಾದ ಮಾಯಮ್ಮ, ಲಕ್ಷ್ಮೀ ಶಿವರಾಜು,ಆಶ್ರಯ ಸಮಿತಿ ಸದಸ್ಯರಾದ ಮಂಜುನಾಥ್ , ಇಬ್ರಾಹಿಂ, ರಾಣಿ ಸಿದ್ದಪ್ಪಾಜಿ, ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗಿಯಾಗಿದ್ದರು.