ಸಮಾಜ ಕಲ್ಯಾಣ ಸಚಿವ ಎಚ್ .ಸಿ .ಮಹದೇವಪ್ಪ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸರಗೂರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದರು.ದೇವಲಾಪುರ ಸಿದ್ದರಾಜು, ಶ್ರೀನಿವಾಸ, ಚಿನ್ನಣ್ಣ,ನಾಗಣ್ಣ ಇತರರು ಇದ್ದರು. 
ಮೈಸೂರು

ಸಚಿವ ಎಚ್.ಸಿ.ಮಹದೇವಪ್ಪ ಹುಟ್ಟುಹಬ್ಬ ಆಚರಣೆ

ಸರಗೂರು: ಪಟ್ಟಣದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್ .ಸಿ.ಮಹದೇವಪ್ಪ ಅವರ ಹುಟ್ಟುಹಬ್ಬವನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು ನೇತೃತ್ವದಲ್ಲಿ ವಿವಿಧ ಸೇವಾ ಕಾರ್ಯಗಳ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ದೇವಲಾಪುರ ಸಿದ್ದರಾಜು, ರಾಜ್ಯದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ತಾಯಿ ಚಿಕ್ಕದೇವಮ್ಮನ ಆರ್ಶೀವಾದ ನೀಡಲಿ ಎಂದರು.
ನಂತರ ಪಪಂ ಸದಸ್ಯ ಶ್ರೀನಿವಾಸ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಲುವರಾಜು, ಮುಖಂಡರಾದ ತಿಮ್ಮಯ್ಯ, ಚಿನ್ನಯ್ಯ ಸೋಮಣ್ಣ, ನಾಗಣ್ಣ, ಕಾಳಸ್ವಾಮಿ, ಭಾನುಪ್ರಕಾಶ್, ಬಸವರಾಜು, ನಂಜಯ್ಯ, ಅಂಬೇಡ್ಕರ್ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಡಿ.ಸಣ್ಣಸ್ವಾಮಿ, ದಡದಹಳ್ಳಿ ಸೋಮಣ್ಣ, ರಾಜು, ಶಿವಲಿಂಗ, ಮಹೇಶ್ ದೇವಲಾಪುರ, ಪ್ರಸನ್ನ, ರಂಗಸ್ವಾಮಿ ಇತರರು ಇದ್ದರು.