ಸರಗೂರು ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ಅರ್ಜುನ ವಾಲಿಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಆಟಗಾರರು. 
ಮೈಸೂರು

ಕ್ರೀಡೆಗಳಿಂದ ಮೂಲಕ ಮಾನಸಿಕ, ದೈಹಿಕ ಸದೃಢತೆ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅನಿಲ್ ಚಿಕ್ಕಮಾದು ಅಭಿಮತ
ಸರಗೂರು : ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಸೋತರೂ ಗೆದ್ದರೂ ಒಂದೇ ಮನಸ್ಥಿತಿಯನ್ನು ಹೊಂದಿರಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಅರ್ಜುನ ವಾಲಿಬಾಲ್ ಪ್ರೀಮಿಯರ್ ಲೀಗ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡಾಪಟುಗಳು ಮನರಂಜನೆಗಾಗಿ ಆಡಬೇಕು. ಕ್ರೀಡೆಗಳ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಪಂದ್ಯಾಟದಲ್ಲಿ ಯಾವುದಾದರೂ ಒಂದು ತಂಡ ಗೆಲ್ಲಲೇಬೇಕು. ಇನ್ನೊಂದು ತಂಡ ಸೋಲಲೇಬೇಕು. ಇಂದಿನ ಪಂದ್ಯಾವಳಿ ಅತ್ಯಂತ ಶಿಸ್ತಿನಿಂದ ನಡೆದಿದೆ ಎಂದು ಅಭಿನಂದಿಸಿದರು.
ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ತಲೆಮಾರಿನಿಂದ ವಾಲಿಬಾಲ್ ಆಟಗಾರರು ಇದ್ದಾರೆ. ಸರಗೂರಿನಲ್ಲಿ ವಾಲಿಬಾಲ್ ಪ್ರಸಿದ್ಧವಾದ ಆಟ. ಜಾತ್ರಾ ಹಾಗೂ ಜಯಂತಿ ಆಚರಣೆ ಮಾಡುವ ಸಮಯದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಪಂದ್ಯಾವಳಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ದಿನಗಳಲ್ಲಿ ಯುವಕರು ಕ್ಲಬ್ ಮಾಡಿ ಉತ್ತಮ ಸಾಮಾಜಿಕ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ತಾಲೂಕಿನಲ್ಲಿ ಪ್ರತಿಯೊಂದು ಜನಾಂಗದವರು ಸೀಮಿತವಾಗಿ ಪಂದ್ಯಾವಳಿ ನಡೆಯುತ್ತದೆ. ಆದರೆ ಎಲ್ಲ ಸಮುದಾಯದಗಳನ್ನು ಒಂದೆ ವೇದಿಕೆ ಯಲ್ಲಿ ತರುವ ಪ್ರಯತ್ನವಾಗಿ ಈ ಪಂದ್ಯಾವಳಿ ಹೆಚ್ಚಿನ ಮಹತ್ವ ಪಡೆದಿದೆ ಎಂದರು.
ಪಂದ್ಯಾವಳಿಯಲ್ಲಿ ಸೋಗಹಳ್ಳಿ ಡ್ರೀಮ್ ಮೇಕರ್ಸ್ ಪ್ರಥಮ ಸ್ಥಾನ ಪಡೆದರು. ಎರಡನೇ ಸ್ಥಾನವನ್ನು ಪಡೆದ ಮಗ್ಗೆ ಅನೀಲ್ ಚಿಕ್ಕಮಾದು ಬಳಗ, ಮೂರನೇ ಸ್ಥಾನವನ್ನು ಕಬಿನಿ ಹಾಗೂ ನಾಲ್ಕನೇ ಸ್ಥಾನವನ್ನು ತುಂಬಸೋಗೆ ಧ್ರುವ ಬಳಗ ಪಡೆಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಶ್ರೀನಿವಾಸ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಎಸಿಎಫ್ ಮಧು ದೇವಯ್ಯ, ಕಳಸೂರು ಬಸವರಾಜು, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಜೆ.ಪುಟ್ಟರಾಜು, ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಮಹೇಶ್ ಎನ್. ಬೇಗೂರು, ಗೌರವಾಧ್ಯಕ್ಷ ಸೋಮೇಶ್ ಕಳಸೂರು, ಉಪಾಧ್ಯಕ್ಷ ಅನೀಲ್ ಕುಮಾರ್, ಕಾರ್ಯದರ್ಶಿ ರತ್ನಯ್ಯ ಮಗ್ಗೆ, ಖಜಾಂಚಿ ಅಪ್ಪು ಜಕ್ಕಹಳ್ಳಿ, ಲಿಂಗೇನಹಳ್ಳಿ ವಿಷಕಂಠ, ಶಿವಕುಮಾರ್, ಪರಶಿವ, ಬಸವರಾಜು, ನವೀನ್, ಭಾಸ್ಕರ್, ಜ್ಯೋತೀಶ್ ಸೇರಿದಂತೆ ಇತರರು ಹಾಜರಿದ್ದರು.