ಹುಣಸೂರು ನಗರದಲ್ಲಿ ಶುಕ್ರವಾರ ಆಯೋಜನೆಗೊಂಡಿರುವ ಮೆಗಾ ಆರೋಗ್ಯ ಉಚಿತ ತಪಾಸಣಾ ಶಿಬಿರದ ಕರಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಗಣೇಶ್ ಕುಮಾರಸ್ವಾಮಿ, ಕಾಂತರಾಜು, ಪ್ರಮಿಳಾ, ಸುರೇಶ್, ಬಿಳಿಕೆರೆ ಪ್ರಸನ್ನ ಇತರರಿದ್ದಾರೆ.
- ಲಯನ್ಸ್ ಕ್ಲಬ್ ಮೈಸೂರು ಗೋಲ್ಡನ್ ಸಿಟಿ ಅಧ್ಯಕ್ಷರಾದ ಪ್ರಮೀಳಾ ಮಾಹಿತಿ
ಹುಣಸೂರು : ಮೈಸೂರಿನ ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಿಜೆಪಿ ತಾಲೂಕು ಘಟಕದ ಸಹಯೋಗದಲ್ಲಿ ಜ.16ರಂದು ಮೆಗಾ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಮೈಸೂರು ಗೋಲ್ಡನ್ ಸಿಟಿ ಅಧ್ಯಕ್ಷರಾದ ಪ್ರಮೀಳಾ ತಿಳಿಸಿದರು.
ನಗರದ ಶಿಕ್ಷಕರ ಭವನದಲ್ಲಿ ಅಂದು ಬೆಳಗ್ಗೆ 8.30ಗಂಟೆಗೆ ಶಿಬಿರ ಆರಂಭಗೊಳ್ಳಲಿದ್ದು, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶಿಬಿರ ಉದ್ಘಾಟಿಸಲಿದ್ದಾರೆ. ಶಿಬಿರದಲ್ಲಿ ಸರ್ಕಾರಿ ಶಾಲೆಯ ಬಡಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಆರೋಗ್ಯ ಉಚಿತ ತಪಾಸಣೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಣ್ಣು, ಕಿವಿ ಮೂಗು ಮತ್ತು ಗಂಟಲು, ಹಲ್ಲುಗಳ ತಪಾಸಣೆ, ಚರ್ಮರೋಗ ತಪಾಸಣೆ ನಡೆಸಲಾಗುವುದು. ಅಗತ್ಯವಿದ್ದವರಿಗೆ ಶಸ್ತ್ರ ಚಿಕಿತ್ಸೆಗೆ ಅನುಕೂಲ ಮಾಡಿಕೊಡಲಾಗುವುದು. ಸಿಎಫ್‌ಟಿಆರ್‌ಐ ಮಾರ್ಗದರ್ಶನದಲ್ಲಿ ಅನೀಮಿಯಾದಿಂದ ಬಳಲುತ್ತಿರುವವರಿಗೆ ಉಚಿತವಾಗಿ ಪ್ರೋಟೀನ್ ಪೌಡರ್‌ಗಳನ್ನು, ಕೃತಕಕಾಲು ಜೋಡಣೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹುಣಸೂರಿನ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಶಿಬಿರದ ಸದುಪಯೋಗಪಡಿಸಿಕೊಳ್ಳಲು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಲ್ಡನ್ ಲಯನ್ ಟಿ.ಸುರೇಶ್, ಬಿಜೆಪಿ ತಾಲೂಕು ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಂತರಾಜು, ನಗರಮಂಡಲದ ಅಧ್ಯಕ್ಷ ನಾರಾಯಣ್, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಹನಗೋಡು ಮಂಜುನಾಥ್, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಬಿಳಿಕೆರೆ ಪ್ರಸನ್ನ, ಮುಖಂಡರಾದ ಕಿರಣ್‌ಕುಮಾರ್, ಸತೀಶ್ ಕುಮಾರ್ ಇದ್ದರು. ಇದೇ ವೇಳೆ ಆರೋಗ್ಯ ಶಿಬಿರದ ಕರಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.