ಸಂಘಟನೆ ತಾಲೂಕು ಸಂಯೋಜಕ ಮಹೇಶ್ ಕುಮಾರ್, ಪದಾಧಿಕಾರಿಗಳಾದ ಬಾಡಗ ಮಂಜು, ಗೆದ್ದಹಳ್ಳ ದೇವರಾಜು, ಪುಟ್ಟಯ್ಯ, ರೇಣುಕಾ, ರತ್ನಮ್ಮ, ಮಹದೇವಸ್ವಾಮಿ, ಮಹೇಶ್‌ಮುತ್ತು ನಿಂಗರಾಜು ಇದ್ದರು.
ಸರಗೂರು: ಸರಗೂರು: ತಾಲೂಕಿನ ಗ್ರಾಮಗಳಿಗೆ ನಿವೇಶನ, ರಸ್ತೆ, ಸೇತುವೆ, ಸ್ಮಶಾನ, ಸಮುದಾಯ ಭವನ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಜಮೀನುಗಳ ಒತ್ತುವರಿ ತೆರವುಗೊಳಿಸಿ ಅರ್ಹರಿಗೆ ಭೂಮಿ ಮಂಜೂರು ಮಾಡಬೇಕು ಎಂದು ದಸಂಸ ಜಿಲ್ಲಾ ಉಪ ಸಂಯೋಜಕ ಹುನಗಹಳ್ಳಿ ಗೋವಿಂದ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಗದ್ದೆಹಳ್ಳ, ಹೆಗ್ಗನೂರು, ನಾಗರೆ, ಕಂದೇಗಾಲ, ಹುಲ್ಲೇಮಾಳ, ದೇವಲಾಪುರ, ಬಾಡಗ ಹಾಗೂ ಹನಗನಹಳ್ಳಿ ಗ್ರಾಮಗಳಲ್ಲಿನ ನಿವೇಶನ, ರಸ್ತೆ, ಸೇತುವೆ ಹಾಗೂ ಸರ್ಕಾರಿ ಜಮೀನುಗಳ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು. ಗದ್ದೆಹಳ್ಳವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಿ, ನಿವೇಶನವಿಲ್ಲದ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಒದಗಿಸಬೇಕು ಎಂದು ಆಗ್ರಹಿಸಿದರು.
ಹುಲ್ಲೇಮಾಳದ ಗೋಮಾಳ ಹಾಗೂ ಸರ್ಕಾರಿ ಶಾಲೆಯ ಜಮೀನಿನ ಒತ್ತುವರಿ ತೆರವು, ದೇವಲಾಪುರದ ಸರ್ಕಾರಿ ಜಮೀನಿನ ಸಮಸ್ಯೆ ಪರಿಹಾರ ಹಾಗೂ ಹನಗನಹಳ್ಳಿಯ ಸರ್ಕಾರಿ ಭೂಮಿಯನ್ನು ಸಂರಕ್ಷಿಸಿ ಅರ್ಹರಿಗೆ ಮಂಜೂರು ಮಾಡಬೇಕು ಎಂದು ಆಡಳಿತ ವ್ಯವಸ್ಥೆಗೆ ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಸಂಯೋಜಕ ಕಂದೇಗಾಲ ಅಣ್ಣಯ್ಯಸ್ವಾಮಿ ಮಾತನಾಡಿ, ತಾಲೂಕಿನ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಸರ್ಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸಿ, ಅರ್ಹ ಬಡ ಕುಟುಂಬಗಳಿಗೆ ನಿವೇಶನ ಹಾಗೂ ಜಮೀನು ಒದಗಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ತಾಲೂಕು ಸಂಯೋಜಕ ಮಹೇಶ್ ಕುಮಾರ್, ಪದಾಧಿಕಾರಿಗಳಾದ ಬಾಡಗ ಮಂಜು, ಗೆದ್ದಹಳ್ಳ ದೇವರಾಜು, ಪುಟ್ಟಯ್ಯ, ರೇಣುಕಾ, ರತ್ನಮ್ಮ, ಮಹದೇವಸ್ವಾಮಿ, ಮಹೇಶ್‌ಮುತ್ತು ನಿಂಗರಾಜು ಇದ್ದರು.