ತರಬೇತುದಾರ ಸ್ಕಂದ ಆರ್.ಅಶ್ವಥ್ ಜೊತೆ ಚಾರ್ವಿಕ್ ಎ. ಗೌಡ ಹಾಗೂ ಆರ್ಯನ್ ಕವನ್ ಗೌಡ ಇದ್ದಾರೆ.
ಮೈಸೂರು: ಆಹ್ವಾನಿತ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿರುವ ಜಿಲ್ಲಾ ಈಜು ಸಂಸ್ಥೆಯ ಈಜುಪಟುಗಳು ಪದಕ ಪಡೆದು ಗಮನ ಸೆಳೆದಿದ್ದಾರೆ.
ನಗರದ ಲಲಿತಾದ್ರಿಪುರಂನ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ಚಾರ್ವಿಕ್ ಎ. ಗೌಡ ಒಂದು ಚಿನ್ನ ಸೇರಿ ಎರಡು ಪದಕ ಪಡೆದರೆ, ಆರ್ಯನ್ ಕವನ್ ಗೌಡ ಕಂಚಿನ ಪದಕ ಪಡೆದಿದ್ದಾರೆ. 50 ಮೀಟರ್ ಫ್ರೀ ಸ್ಟೈಲ್ (ಗುಂಪು 3)ನಲ್ಲಿ ಆರ್ಯನ್ ಕವನ್ ಗೌಡ ಕಂಚಿನ ಪದಕ ಪಡೆದರೆ, ಚಾರ್ವಿಕ್ ಎ. ಗೌಡ 50 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಚಿನ್ನ ಮತ್ತು 25 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಪಡೆದಿದ್ದಾರೆ.
ಈ ಇಬ್ಬರು ಯುವ ಈಜುಗಾರರು ಎಂಡಿಎಸ್‌ಎ ಮುಖ್ಯ ತರಬೇತುದಾರ ಸ್ಕಂದ ಆರ್.ಅಶ್ವಥ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. 15 ರಾಷ್ಟ್ರೀಯ ದಾಖಲೆಗಳನ್ನು ಹೊಂದಿರುವ ಸ್ಕಂದ 42 ರಾಷ್ಟ್ರೀಯ ಪದಕಗಳನ್ನು ಹೊಂದಿರುವ ಏಕೈಕ ಮೈಸೂರಿನವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.