ನಗರದ ಕಿರು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿ.ಎನ್.ಮಂಜೇಗೌಡ, ಮುತ್ತುರಾಜ್, ಮೈ.ನಾ.ಲೋಕೇಶ್, ವಿ.ಎನ್. ಮಲ್ಲಿ ಕಾರ್ಜುನಸ್ವಾಮಿ, ಎನ್.ಆರ್ ನಾಗೇಶ್, ಎಂ. ಡಿ ರಾಜೇಶ್, ಹರೀಶ್ ರೆಡ್ಡಿ, ಆನಂದ್, ನಾಗೇಂದ್ರ, ಮುರಳೀಧರ , ರಾಮಣ್ಣ ಇದ್ದರು. 
ಮೈಸೂರು

ಸವಿತಾ ಸಮಾಜದವರು ವಿವಿಧ ರಂಗದಲ್ಲಿ ಪ್ರಗತಿ ಹೊಂದಲಿ

ಅವಿನಾಶ್ ಜೈನಹಳ್ಳಿ
ಮೈಸೂರು: ಒಬ್ಬ ವ್ಯಕ್ತಿ ಸುಂದರವಾಗಿ ಕಾಣಲು ಸವಿತಾ ಸಮಾಜದವರ ಕಲೆ ಮತ್ತು ಶ್ರಮ ಮುಖ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ನಗರಪಾಲಿಕೆ, ಸವಿತಾ ಮಹರ್ಷಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದ ಕಿರುರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸವಿತಾ ಮಹರ್ಷಿ ಸೂರ್ಯವಂಶದ ಮೂಲ ಪುರುಷರು. ಸವಿತಾ ಮಹರ್ಷಿ ಇತಿಹಾಸ ತಿಳಿಯುವ ಮೂಲಕ ಈ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಸವಿತಾ ಸಮಾಜಕ್ಕೆ ಸರ್ಕಾರ 18 ಕೋಟಿ ರೂ. ಅನುದಾನವನ್ನು ನೀಡಿದೆ ಎಂದರು.
ಸವಿತಾ ಸಮಾಜದ ಅಧ್ಯಕ್ಷ ಮುತ್ತುರಾಜ್ ಮಾತನಾಡಿ, ಅಂದು ಡಿ.ದೇವರಾಜ ಅರಸು ಹಾಕಿ ಕೊಟ್ಟ ದಾರಿಯಲ್ಲಿ ಇಂದು ನಾವು ನಡೆಯುತ್ತಿದ್ದೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ನೀಡಿದ ಮಹಾನ್ ವ್ಯಕ್ತಿ ಎಂದರು.
ಸಾಹಿತಿ ಮೈ.ನಾ.ಲೋಕೇಶ್ ಮಾತನಾಡಿ, ಹಡಪದ ಅಪ್ಪಣ್ಣ ಅವರು ಬಸವಣ್ಣನ ಅನುಭವ ಮಂಟಪದ ಉಸ್ತುವಾರಿ ವಹಿಸಿದ್ದರು. ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಅಪ್ಪಣ್ಣ ನವರ ಮಾರ್ಗದರ್ಶನವನ್ನು ಪಡೆಯಲು ಬಸವಣ್ಣ ಸೂಚಿಸಿದ್ದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ. ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮುಖಂಡರಾದ ಎನ್.ಆರ್.ನಾಗೇಶ್, ಎಂ. ಡಿ ರಾಜೇಶ್, ಹರೀಶ್ ರೆಡ್ಡಿ, ಆನಂದ್, ನಾಗೇಂದ್ರ, ಮುರಳೀಧರ, ರಾಮಣ್ಣ ಇದ್ದರು.