ರಾವಂದೂರು ಗ್ರಾಮದ ಶಿವು ಸೈನಿಕ ಅಕಾಡೆಮಿಯಿಂದ ರಾವಂದೂರಿನಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಯುವಕರು. ಶಿವು, ಗಣೇಶ್, ರೇವಣ್ಣ, ಶ್ರೀಕಂಠ, ಮಣಿ, ಭರತ್, ಸಚಿನ್ ಇದ್ದರು.
ರಾವಂದೂರು: ನಮ್ಮ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಯೋಧರ ತ್ಯಾಗ ಇಂದಿನ ಯುವಕರಿಗೆ ದಾರಿದೀಪವಾಗಬೇಕು ಎಂದು ನಿವೃತ್ತ ಯೋಧ ಶಿವು ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದ ಶಿವು ಸೈನಿಕ ಅಕಾಡೆಮಿ ವತಿಯಿಂದ ಭಾರತೀಯ ಸೇನೆ ದಿನಾಚರಣೆಯ ಅಂಗವಾಗಿ ರಾವಂದೂರಿನಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತೀಯ ಮೊದಲ ಚೀಫ್ ಆಫ್ ದಿ ಆರ್ಮಿ ಸ್ಟಾಫ್ ಜನರಲ್ ಕೆ.ಎಂ.ಕಾರ್ಯಪ್ಪ ಅವರು ಬ್ರಿಟಿಷರಿಂದ ಅಧಿಕಾರ ವಹಿಸಿಕೊಂಡಂತಹ ಈ ದಿನವನ್ನು ದೇಶದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಯುವಕರಿಗೆ ಸೇನೆಯ ಬಗ್ಗೆ ಅರಿವು ಮೂಡಿಸುವ ಜತೆಗೆ ಯುವಕರು ಸೇನೆಗೆ ಸೇರಲು ಪ್ರೇರೇಪಿಸುವುದು ಶಿವು ಸೈನಿಕ ಅಕಾಡೆಮಿಯ ಮೂಲ ಉದ್ದೇಶ ಎಂದರು.
ಇದೇ ಸಂದರ್ಭದಲ್ಲಿ ಸೈನಿಕರಾದ ಗಣೇಶ್, ರೇವಣ್ಣ, ಶ್ರೀಕಂಠ, ಮಣಿ, ಭರತ್, ಸಚಿನ್ ಭಾಗವಹಿಸಿದ್ದರು.