ಬೆಟ್ಟದಪುರ ಸಮೀಪದ ಆನಂದಗೆರೆ ಗ್ರಾಮದ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಗ್ರಾಮಸ್ಥರವತಿಯಿಂದ ಆಯೋಜಿಸಿದ್ದ ಶನಿಪ್ರಭಾವ ಅಥವಾ ರಾಜವಿಕ್ರಮ ಪೌರಾಣಿಕ ನಾಟಕದ ವೇದಿಕೆಯನ್ನು ಗಣ್ಯರು ಉದ್ಘಾಟನೆ ಮಾಡಿದರು. ಮಾಜಿ ಶಾಸಕ ಕೆ.ಮಹದೇವ್, ನಿಂಗಮ್ಮ, ಹನಗೋಡು ಪ್ರಕಾಶ್, ಕೋಮಲಾಪುರ ಸ್ವಾಮಿಗೌಡ ಇದ್ದರು. 
ಮೈಸೂರು

ಪೌರಾಣಿಕ ನಾಟಕ ಸಂಸ್ಕೃತಿ ಉಳಿಯಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಕೆ.ಮಹದೇವ್ ಆಶಯ
ಬೆಟ್ಟದಪುರ: ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಪೌರಾಣಿಕ ನಾಟಕಗಳ ಸಂಸ್ಕೃತಿ ನೇಪಥ್ಯಕ್ಕೆ ಸರಿಯುತ್ತಿದ್ದು, ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಮಾಜಿ ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಆನಂದಗೆರೆ ಗ್ರಾಮದ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶನಿಪ್ರಭಾವ ಅಥವಾ ರಾಜಾವಿಕ್ರಮ ಎಂಬ ಪೌರಾಣಿಕ ನಾಟಕದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಾಟಕಗಳು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದವು. ಆದರೆ, ಇಂದು ನಾಟಕಗಳು ಪ್ರದರ್ಶನವಾದರೂ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಹಾಗೂ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ನಾಟಕಗಳು ಹೆಚ್ಚು ಪ್ರದರ್ಶನವಾಗಬೇಕು ಎಂದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮಂಜುನಾಥ್ ಆರ್. ಗೌಡ ಮಾತನಾಡಿ, ಪೌರಾಣಿಕ ನಾಟಕಗಳು ಹೆಚ್ಚಾಗಿ ಗ್ರಾಮೀಣ ಜನತೆಯಿಂದ ಉಳಿಸುವ ಬೆಳೆಸಲು ಕೆಲಸವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾಮದಲ್ಲಿ ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ನಾಟಕ ಆಯೋಜಿಸುವ ಮೂಲಕ ಎಲ್ಲರನ್ನು ಒಗ್ಗೂಡಿಸುವ ಕೆಲಸವಾಗಿದೆ ಎಂದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಮಹಿಳಾ ಅಧ್ಯಕ್ಷೆ ನಿಂಗಮ್ಮ, ಉಪಾಧ್ಯಕ್ಷ ಹನಗೋಡು ಪ್ರಕಾಶ್, ಯುವ ಘಟಕದ ಅಧ್ಯಕ್ಷ ಕೋಮಲಾಪುರ ಸ್ವಾಮಿಗೌಡ, ಜಿಲ್ಲಾ ಉಪಾಧ್ಯಕ್ಷ ವಿಜಯ್ ರಾಜ್ ಅರಸ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಕಾವೇರಮ್ಮ, ಅಂಬಲಾರೆ ಡೇರಿ ಅಧ್ಯಕ್ಷ ಶಂಕರೇಗೌಡ, ಗ್ರಾ.ಪಂ. ಸದಸ್ಯ ಕೃಷ್ಣೆಗೌಡ, ಮುಖಂಡರಾದ ಸುಂದ್ರೆಗೌಡ, ಸೋಮಶೇಖರ್, ರಾಮಚಂದ್ರ, ಚಂದ್ರೆಗೌಡ, ಶಿವಣ್ಣೆಗೌಡ, ಶಂಭುಗೌಡ, ಮಹೇಶ್, ಜಗದೀಶ್, ಕುಮಾರಣ್ಣ, ಮಹಾದೇವ, ರಾಜೇಗೌಡ, ಬಸವೇಗೌಡ, ದೀಪುಪಾಲಾಕ್ಷ, ಪ್ರಭು, ತಿಮ್ಮೆಗೌಡ, ಚಂದ್ರೆಗೌಡ, ಡ್ರಾಮಾ ಮಾಸ್ಟರ್ ಶಿವಣ್ಣ ಸೇರಿದಂತೆ ಪ್ರಾತ್ರಧಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.