ಆಯುರ್ವೇದ 
ಮೈಸೂರು

ಆಯುರ್ವೇದ ಲೇಖನಗಳು ಜನಪರವಾಗಿರಲಿ

ಅವಿನಾಶ್ ಜೈನಹಳ್ಳಿ
ಆಯುರ್ವೇದ ಲೇಖನಗಳು ಜನಪರವಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ನಿರ್ದೇಶಕ ಸುರೇಶ್ ಶಾಪೆಟಿ ತಿಳಿಸಿದರು.
ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಲೇಖನಾನುಸಂಧಾನ’ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ಜ್ಞಾನವು ಲೇಖನಗಳ ಮೂಲಕ ಜನರ ಮನೆ ಮನಗಳನ್ನು ತಲುಪಬೇಕು ಎಂದರು.
ಆಕಾಶವಾಣಿಯ ಹಿರಿಯ ಅಧಿಕಾರಿ ಕೇಶವ ಮೂರ್ತಿ ಮಾತನಾಡಿ, ಆಯುರ್ವೇದದ ಪ್ರಚಾರ ಮತ್ತು ಪ್ರಸಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಸಾರ್ವಜನಿಕ ಆರೋಗ್ಯ ಕೇಂದ್ರದ ಡಾ.ಸತ್ಯನಾರಾಯಣ, ಪ್ರಾಧ್ಯಾಪಕಿ ಡಾ.ಅನುರೂಪಾ, ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಇದ್ದರು.