ನಂಜನಗೂಡು ತಾಲೂಕಿನಲ್ಲಿ ನಡೆಯುತ್ತಿರುವ ಯೋಗ ಹಬ್ ಹಿನ್ನೆಲೆಯಲ್ಲಿ ಶ್ರೀಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ಶಾಸಕ ದರ್ಶನ್ ಧ್ರವನಾರಾಯಣ ಮತ್ತು ಸಂಸದ ಸುನಿಲ್ ಬೋಸ್ ಅವರು ಯೋಗ ಅಭ್ಯಾಸ ಮಾಡುವ ಯೋಗಾಭ್ಯಾಸಕ್ಕೆ ಚಾಲನೆ ನೀಡಿದರು. ಕೆ.ಮಾರುತಿ, ಬಸವರಾಜ್, ಬಸವೇಗೌಡ, ಶ್ರೀಕಂಠಸ್ವಾಮಿ, ಸಿ.ಎಂ.ಶಂಕರ್, ಶ್ರೀಧರ್ ಇತರರಿದ್ದರು. 
ಮೈಸೂರು

ತಾಲ್ಲೂಕಿನಲ್ಲಿ ಸಾಮೂಹಿಕ ಯೋಗಭ್ಯಾಸ ಖುಷಿ ತಂದಿದೆ

ನಂಜನಗೂಡು: ದೇವಾಲಯದ ಆವರಣದ ಮುಂಭಾಗದಲ್ಲಿ ಮೂರನೇ ಬಾರಿ ಸಾಮೂಹಿಕ ಯೋಗಭ್ಯಾಸ ನಡೆಸುತ್ತಿರುವುದು, ಕ್ಷೇತ್ರದ ಶಾಸಕನಾಗಿ ನನಗೆ ಬಹಳ ಹೆಮ್ಮೆ ಹಾಗೂ ಖುಷಿ ವಿಚಾರವಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ನಗರದ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಆಯುಷ್ಮಾನ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 90 ದಿನಗಳವರೆಗೆ ನಡೆಯುವ ‘ಯೋಗ ಹಬ್’ ಕಾರ್ಯಕ್ರಮವನ್ನು ಯೋಗಪಟುಗಳೊಂದಿಗೆ ಯೋಗಾಭ್ಯಾಸ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತಾನಾಡಿದ ಶಾಸಕರು, ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ನಾಡ ಹಬ್ಬ ದಸರಾದ ’ಯೋಗ ದಸರ’ ಗರಳಪುರಿ ಉತ್ಸವದಲ್ಲಿಯೂ ’ಯೋಗೋತ್ಸವ’ ಮತ್ತು ಇಂದು ಯೋಗ ಹಬ್ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಿ, ಸಾರ್ವಜನಿಕರಲ್ಲಿ ಯೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ತಾಲೂಕಿನ 45 ಗ್ರಾಂಪಂಗಳಲ್ಲಿ 90 ದಿನಗಳವರೆಗೆ ಯೋಗ ಹಬ್ ಕಾರ್ಯಕ್ರಮ ಜರುಗಲಿದೆ.
ಸಂಸದ ಸುನಿಲ್ ಬೋಸ್ ಮಾತನಾಡಿ, ನಮ್ಮ ಪೂರ್ವಿಕರು ತಮಗೆ ಅರಿವಿಲ್ಲದೆ ಯೋಗಭ್ಯಾಸ ಮಾಡುತ್ತಿದ್ದರು. ಅವರು ದೈನಂದಿನ ದಿನಚರಿಯಲ್ಲಿಯೇ ಯೋಗಭ್ಯಾಸ ಇತ್ತು. ಇತ್ತೀಚಿನ ದಿನಗಳಲ್ಲಿ ನಮ್ಮ ಎಲ್ಲ ಕೆಲಸವನ್ನು ಯಂತ್ರಗಳು ಮಾಡುತ್ತಿರುವುದರಿಂದ ನಮ್ಮ ಯೋಗಕ್ಕೆ ಯಾವುದೇ ರೀತಿಯ ವ್ಯಾಯಾಮ ಸಿಗುತ್ತಿಲ್ಲ. ಕಿರಿಯ ವಯಸ್ಸಿನಲ್ಲಿ ಕೆಲವರಿಗೆ ಹೃದಯಘಾತ, ಕಿಡ್ನಿ, ಲಿವರ್ ಇನ್ನೂ ಮುಂತಾದ ದೀರ್ಘಕಾಲಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಯೋಗ ಮಾಡುವುದರಿಂದ ಆರೋಗ್ಯವನ್ನು ಸಮತೋಲನವಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಕೆ.ಮಾರುತಿ, ನಗರಸಭೆ ಪೌರಾಯುಕ್ತ ಬಸವರಾಜ್, ದೇವಸ್ಥಾನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಸವೇಗೌಡ, ಮಾಜಿ ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ.ಶಂಕರ್, ಶ್ರೀಧರ್, ಗಾಯತ್ರಿ ಮೋಹನ್, ಕೆ.ಬಿ.ಸ್ವಾಮಿ, ಗಂಗಾಧರ್, ಗೋಪಾಲಕೃಷ್ಣ, ಗಿರೀಶ್, ಇಲಾಖೆಯ ಅಧಿಕಾರಿಗಳಾದ ಡಾ.ಅಶೋಕ್‌ಕುಮಾರ್, ಡಾ.ಸುಜಾತಾ, ಡಾ.ರಾಘವೇಂದ್ರ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಗೂ ಯೋಗಪಟುಗಳು ಉಪಸ್ಥಿತರಿದ್ದರು.