ಶಾಸಕ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಿ.ನರಸೀಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದರು. ಎಂ.ಮಲ್ಲಿಕಾರ್ಜುನಸ್ವಾಮಿ, ಎಂ.ಡಿ.ಬಸವರಾಜು, ಉಕ್ಕಲಗೆರೆ ಬಸವಣ್ಣ, ಎಸ್.ಎನ್.ಸಿದ್ದಾರ್ಥ, ಸೋಸಲೆ ಮಹದೇವಸ್ವಾಮಿ, ಶಿವಮ್ಮ ಲಿಂಗರಾಜು, ಎಚ್.ಎನ್. ಉಮೇಶ್ ಇತರರಿದ್ದರು.
ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ತಿ.ನರಸೀಪುರ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರಿಂದ ಆಕ್ರೋಶ ವ್ಯಕ್ತವಾಗಿದ್ದು, ಬ್ಲಾಕ್ ಅಧ್ಯಕ್ಷರು ಸೇರಿದಂತೆ ವಿವಿಧ ಪದಾಧಿಕಾರಿಗಳ ಹುದ್ದೆಗೆ ಮಂಗಳವಾರ ಸಾಮೂಹಿಕ ರಾಜೀನಾಮೆ ಘೋಷಿಸಿದ್ದು, ಕಾಂಗ್ರೆಸ್ ಕಾರ್ಯಕ್ರಮಗಳಿಂದ ದೂರವಿರಲು ನಿರ್ಧಾರ ಕೈಗೊಂಡಿದ್ದಾರೆ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಭೆ ಸೇರಿದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಮುಖಂಡರು ಸಾಮೂಹಿಕ ರಾಜೀನಾಮೆ ಪ್ರಕಟಿಸಿದರು.
ರಾಜ್ಯದಲ್ಲಿ ಅಹಿಂದ ಸಂಘಟನೆಗೆ ಸಿದ್ದರಾಮಯ್ಯ ಅವರೊಂದಿಗೆ ಹಗಲಿರುಳು ದುಡಿದು, ಕಾಂಗ್ರೆಸ್ ಸಂಘಟನೆಗೆ ಬಲ ತುಂಬಿದ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ನೀಡಬೇಕಿತ್ತು. ಆದರೆ ಎರಡನೇ ಹಂತದಲ್ಲಿಯೂ ನೀಡದೆ ಕಡೆಗಣಿಸಿರುವ ಪಕ್ಷದ ವರಿಷ್ಠರ ಕ್ರಮ ಎಲ್ಲರಿಗೂ ತೀವ್ರ ನೋವನ್ನುಂಟು ಮಾಡಿದೆ. ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಸಚಿವ ಸ್ಥಾನ ನೀಡುವವವರೆಗೂ ಕಾಂಗ್ರೆಸ್ ಚಟುವಟಿಕೆ ಮತ್ತು ಕಾರ್ಯಕ್ರಮ ಬಹಿಷ್ಕರಿಸುತ್ತೇವೆ ಎಂದು ಮುಖಂಡರು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ, ಮಾಜಿ ಪ್ರಧಾನ ಹೆಮ್ಮಿಗೆ ಶೇಷಾದ್ರಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಿರಿಯೂರು ವೀರೇಂದ್ರ, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಎಂ.ಪರಶಿವಮೂರ್ತಿ ಹಿರಿಯ ಮುಖಂಡ ಸೋಸಲೆ ಮಹದೇವಸ್ವಾಮಿ ಮಾತನಾಡಿದರು.
ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಚೆನ್ನಕೇಶವ, ಟೌನ್ ಅಧ್ಯಕ್ಷ ಅಂದಾನಿ ಗೌಡ, ಜಿ.ಪಂ ಮಾಜಿ ಸದಸ್ಯ ಹೊನ್ನನಾಯಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ನಿರ್ದೇಶಕ ಎಂ.ಎಸ್.ಶಿವಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ಎಚ್.ಎನ್.ಉಮೇಶ್, ಮಾಜಿ ಸದಸ್ಯರಾದ ರಾಮಲಿಂಗಯ್ಯ, ಕೆಬ್ಬೆ ಶಿವಸ್ವಾಮಿ, ರಂಗಪ್ಪ, ನರಸಿಂಹಮಾದ ನಾಯಕ, ಸೋಸಲೆ ಮಹೇಶ್, ಕೊಳತೂರು ಕುಮಾರ್, ಪಿಎಸಿಸಿಎಸ್ ನಿರ್ದೇಶಕಿ ಶಿವಮ್ಮ ಲಿಂಗರಾಜು, ಮುಖಂಡರಾದ ಅಕ್ಕೂರು ಗುರುಮೂರ್ತಿ, ಮಾವಿನಹಳ್ಳಿ ಆರ್.ಮಾದೇಶ್, ಹೆಮ್ಮಿಗೆ ಸೋಮಣ್ಣ, ಕಲಿಯೂರು ಶಿವಣ್ಣ, ಕೋಣಗಳ್ಳಿ ನಾಗರಾಜು, ಕೊತ್ತೆಗಾಲ ಬಸವರಾಜು, ಯಾಚೇನಹಳ್ಳಿ ಅಶೋಕ್, ಬೀಡನಹಳ್ಳಿ ನಂದೀಶ್, ಚಂದ್ರಧರ, ನವಾಜ್ ಖಾನ್ ಎಂ.ರಂಗರಾಮು ಹಾಗೂ ಇತರರಿದ್ದರು.