ಸರಗೂರು ತಾಲೂಕಿನ ಹಾದನೂರು ಗ್ರಾಮದಲ್ಲಿ ಮಾರಮ್ಮನ ಹಬ್ಬದ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯಾ ಅನಿಲ್ ಚಿಕ್ಕಮಾದು ತಾಯಿ ಮಾರಮ್ಮನ ದರ್ಶನ ಪಡೆದರು.  
ಮೈಸೂರು

ಹಾದನೂರಿನಲ್ಲಿ ಮಾರಮ್ಮನ ಹಬ್ಬದ ಸಂಭ್ರಮ

ಸರಗೂರು: ತಾಲೂಕಿನ ಹಾದನೂರಿನಲ್ಲಿ ಗ್ರಾಮ ದೇವತೆ ಮಾರಮ್ಮನ ಹಬ್ಬ ಅದ್ದೂರಿಯಾಗಿ ಆಚರಿಸಲಾಯಿತು.
ಹಬ್ಬದ ಹಿನ್ನ್ನೆಲೆಯಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಪೂಜಾ ಕಂಕರ್ಯ ನೆರವೇರಿತು. ಬುಧವಾರ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ದೇಗುಲಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯಾ ಅನಿಲ್ ಚಿಕ್ಕಮಾದು ಅವರು ಸಹ ಬುಧವಾರ ದೇಗುಲಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿದರು.
ಗ್ರಾಪಂ ಸದಸ್ಯರಾದ ಪ್ರಕಾಶ್, ರಾಜೇಶ್, ಶಿವರಾಜು, ಭಾಗ್ಯಾ ಕೇಂಪಸಿದ್ದ, ಗ್ರಾಮದ ಯಜಮಾನರಾದ ಸತೀಶ್, ಗುರುಪ್ರಸಾದ್, ಜವರ, ಗಡಿ ಯಜಮಾರು ರಾಜಯ್ಯ, ಮುಖಂಡರಾದ ನಾಗೇಂದ್ರ, ಕೆಂಪಸಿದ್ದ, ನಾಗರಾಜು, ರವಿ, ಶಶಿಕುಮಾರ್, ನಾಗರಾಜು, ಸುರೇಶ್, ಸಿದ್ದರಾಜು ಇತರರು ಇದ್ದರು.