ಸರಗೂರು ತಾಲೂಕು ದೇವಲಾಪುರ ಗ್ರಾಮದಲ್ಲಿ ಅಳಗಂಚಿ ಸತ್ಯವತೆ ಶ್ರೀ ಉದ್ಭವ ಮಾರಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. 
ಮೈಸೂರು

ಸಂಭ್ರಮದ ಮಾರಮ್ಮ ಜಾತ್ರಾ ಮಹೋತ್ಸವ

ಲಲಾಟಾಕ್ಷ ಎಸ್
ಸರಗೂರು: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಬುಧವಾರ ಅಳಗಂಚಿ ಸತ್ಯವತೆ ಶ್ರೀ ಉದ್ಭವ ಮಾರಮ್ಮನವರ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಬೀದಿಗಳನ್ನು ತಳಿರು ತೋರಣ, ರಂಗೋಲಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಬೆಳಗ್ಗೆ ಗಣಪತಿ ಹೋಮ, ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ದುರ್ಗಹೋಮ, ಕುಂಕುಮಾರ್ಚನೆ ನಡೆದವು. ಬೆಳಗ್ಗೆ ನದಿಗೆ ತೆರಳಿ ಗಂಗಾಪೂಜೆ ನೆರವೇರಿಸಿ ಮಾರಮ್ಮನವರನ್ನು ಪೂರ್ಣಕುಂಭ, ಕಳಸ, ಮಂಗಳವಾದ್ಯ, ಸತ್ತಿಗೆ, ವೀರಗಾಸೆ ಹಾಗೂ ಕಲಾತಂಡಗಳೊಂದಿಗೆ ಮೆರವಣಿಗೆ
ನಡೆಸಲಾಯಿತು. ಉತ್ಸವ ದೇವಾಲಯಕ್ಕೆ ತಲುಪಿದ ನಂತರ ವಿಶೇಷ ಪೂಜೆ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮಹದೇವಯ್ಯ, ಶಿವು, ಸಿದ್ದಯ್ಯ, ದೇವಾಲಯ ಸಮಿತಿ ಅಧ್ಯಕ್ಷ ಜಲೇಂದ್ರ, ಉಪಾಧ್ಯಕ್ಷ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರ್, ನಾಗಮ್ಮ ನಾಗೇಂದ್ರ, ಡಿ.ಜಿ.ಸೋಮಣ್ಣ, ಮಹೇಶ್, ಶಿವರಾಜು, ನಂಜಪ್ಪ, ಪ್ರಭಾಕರ, ಶಂಕರಯ್ಯ, ಮಹದೇವ್, ಶಿವಣ್ಣ, ನಾಗೇಂದ್ರ, ಕೂಸಣ್ಣ, ಮಂಜು, ಬಸವರಾಜು, ನಾರಾಯಣಿ, ದೇವಾಲಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.