ಕುವೆಂಪು ಅವರ ನಿವಾಸ ಉದಯರವಿಗೆ ಭೇಟಿ ನೀಡಿದ ಕನ್ನಡಪರ ಸಂಘಟನೆಗಳ ಮುಖಂಡರು ಸ್ಮಾರಕ ನಿರ್ಮಾಣಮಾಡಲು ತಾರಿಣಿ ಚಿದಾನಂದಗೌಡ ಬೆಂಬಲ ಘೋಷಿಸಿದರು. ಎಂ.ಮೋಹನ ಕುಮಾರ್‌ಗೌಡ, ಭೀಮಾಶಂಕರ ಪಾಟೀಲ, ಎಂ.ಬಿ. ನಾಗನಗೌಡ, ಮುಖಂಡರಾದ ಪ್ರಶಾಂಶ್‌ಗೌಡ, ಶ್ರೇಯಸ್, ಬನ್ನೂರು ರಾಜು ಇತರರು ಇದ್ದರು. 
ಮೈಸೂರು

ಉದಯರವಿ ನಿವಾಸ ಸ್ಮಾರಕ ಅಭಿವೃದ್ಧಿಗೆ ಹಲವು ಸಂಘಟನೆಗಳ ಬೆಂಬಲ

ಪ್ರಮುಖ ಮುಖ್ಯಾಂಶಗಳು

  • ಕನ್ನಡಿಗರಿಂದ ಚಂದ ಸಂಗ್ರಹಿಸಿ ಸ್ಮಾರಕ ಅಭಿವೃದ್ಧಿ ಮಾಡುತ್ತೇವೆ
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ತವರು ಜಿಲ್ಲೆಯ ಉದಯರವಿ ಅಭಿವೃದ್ಧಿಗೆ ಮನಸು ಮಾಡುತ್ತಿಲ್ಲ
ಮೈಸೂರು:ಉದಯರವಿ ನಿವಾಸ ಸ್ಮಾರಕವಾಗಿ ಅಭಿವೃದ್ಧಿಪಡಿಸಲು ಬೆಂಬಲ ಸೂಚಿಸಿದ ಕನ್ನಡಪರ ಸಂಘಟನೆಗಳು ಸ್ಥಳಕ್ಕೆ ಭೇಟಿ ನೀಡಿ ತಾರಿಣಿ ಚಿದಾನಂದಗೌಡ ಅವರೊಂದಿಗೆ ಚರ್ಚಿಸಿದರು.
ಶ್ರೀರಾಮಾಯಣದರ್ಶನಂ ಕೃತಿ ಮೂಲಕ ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆಯ ಕವಿ ಕುವೆಂಪು ಅವರ ಉದಯರವಿ ನಿವಾಸ ಸ್ಮಾರಕವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮೀನಮೇಷ ಎಣಿಸಿದರೆ ಕನ್ನಡ ಪರ ಸಂಘಟನೆಗಳು ಕನ್ನಡಿಗರಿಂದ ಚಂದ ಸಂಗ್ರಹಿಸಿ ಸ್ಮಾರಕ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಕಲಬುರಗಿ ನಗರದಲ್ಲಿ ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಪ್ರತಿಮೆ ಸ್ಥಾಪಿಸಲು ಸಂಪುಟ ಸಭೆಯಲ್ಲಿ ಅನುಮತಿ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ತವರು ಜಿಲ್ಲೆಯ ಉದಯರವಿ ಅಭಿವೃದ್ಧಿಗೆ ಮನಸು ಮಾಡುತ್ತಿಲ್ಲ. ಈಗಲಾದರೂ ಸರ್ಕಾರ ಉದಯರವಿಯನ್ನು ಸ್ಮಾರಕವನ್ನಾಗಿಸಲು ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ ಕುಮಾರ್‌ಗೌಡ, ಕರ್ನಾಟಕ ನವ ನಿರ್ಮಾಣ ಸೇನೆಯ ಭೀಮಾಶಂಕರ ಪಾಟೀಲ, ಕರುನಾಡು ಸೇವಕರ ಸಂಘಟನೆ ವಕ್ತಾರ ಎಂ.ಬಿ. ನಾಗನಗೌಡ, ಮುಖಂಡರಾದ ಪ್ರಶಾಂತ್‌ಗೌಡ, ಶ್ರೇಯಸ್, ಬನ್ನೂರು ರಾಜು ಇತರರು ಇದ್ದರು.