ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಳ್ಳಿ ಕಡಗ ತೊಡಿಸಿ ಗೌರವಿಸಿದರು. 
ಮೈಸೂರು

ಮಂಜುನಾಥ್ ಗೆಲುವಿಗೆ ಶ್ರಮಿಸಿ

ಅಭಿನಯ್ ಎಚ್.ಎಂ
ಹನಗೋಡು : ಹುಣಸೂರು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ನೇತೃತ್ವದಲ್ಲಿ ಹುಣಸೂರು ನಗರ, ಗ್ರಾಮಾಂತರ ಹಾಗೂ ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ನೇಹಜೀವಿ ಬಳಗದ ಸ್ನೇಹಿತರು ಸೋಮವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಕುಮಾರ ಕೃಪ ಅತಿಥಿಗೃಹದಲ್ಲಿ ಭೇಟಿಯಾಗಿ ಕೈಗೆ ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿ ಡಿಕೆಶಿ, ಕಳೆದ ಚುನಾವಣೆಯಲ್ಲಿ ಮಂಜುನಾಥ್ ಅವರ ಗೆಲುವು ಪಕ್ಕ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಅತ್ಯಲ್ಪ ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಸೋಲಿಗೆ ಕಾರ್ಯಕರ್ತರು ಎದೆಗುಂದದೆ ಕಾಂಗ್ರೆಸ್ ಮತ್ತು ಮಂಜುನಾಥ್ ಅವರ ಕೈ ಬಲಪಡಿಸಲು ಮತ್ತಷ್ಟು ಶ್ರಮ ವಹಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ನಾನು ಸಹಕಾರ ನೀಡುತ್ತೇನೆ. ಮುಂಬರುವ 2028 ರ ಚುನಾವಣೆಯಲ್ಲಿ ಮಂಜುನಾಥ್ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಸಂಸದ ಉಗ್ರಪ್ಪ, ಕುರುಬರ ಸಂಘದ ಅಧ್ಯಕ್ಷ ಡಿ.ಕೆ.ಕುನ್ನೇಗೌಡರು, ನಾಯಕ ಸಂಘದ ಅಧ್ಯಕ್ಷ ಅಣ್ಣಯ್ಯನಾಯಕ, ಹುಣಸೂರು ತಾ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಗಣಪತಿ ಇಂಡಲ್ಕರ್, ಬ್ಲಾಕ್ ಅಧ್ಯಕ್ಷರಾದ ರವಿಪ್ರಸನ್ನ, ಬಾಲಸುಂದರ್, ಬಿಳಿಕೆರೆ ಪ್ರೆಮ್ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಸ್.ಕುಮಾರ್, ಉದ್ಯಮಿಗಳಾದ ಟಿ.ಕೃಷ್ಣ, ಡಾ.ಎಚ್.ವಿ.ಕಾರ್ತಿಕ್, ಮಹಿಳಾ ಘಟಕದ ಅಧಕ್ಷೆ ಸುನೀತಾ ಜಯರಾಮೇಗೌಡ, ಸುಮಿತ್ರಾ, ಯುವ ಘಟಕದ ಅಧ್ಯಕ್ಷ ದರ್ಶನ್ ಇತರರಿದ್ದರು.