ಸರಗೂರು ತಾಲೂಕಿನ ನಂಜೀಪುರ ಗ್ರಾಮದಲ್ಲಿ ಮಹದೇಶ್ವರಸ್ವಾಮಿ ದೇವಸ್ಥಾನದ 48ನೇ ದಿನದ ಮಂಡಲ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಗ್ರಾಮದ ಮುಖಂಡರಾದ ಶಿವಮಲ್ಲಪ್ಪ, ಶಿವರಾಜಪ್ಪ, ಪ್ರಭುಸ್ವಾಮಿ ಇತರರು ಇದ್ದರು.
ಸರಗೂರು: ತಾಲೂಕಿನ ನಂಜೀಪುರ ಗ್ರಾಮದಲ್ಲಿ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದ 48ನೇ ದಿನದ ಮಂಡಲ ಪೂಜೆಯನ್ನು ಗ್ರಾಮಸ್ಥರು ನೆರವೇರಿಸಿದರು.
ಏ. 29ರಂದು ದೇವಸ್ಥಾನದ ಕಳಸಾರೋಹಣ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಜರುಗಿತ್ತು. ನಂತರ ಪ್ರತಿ ನಿತ್ಯ ಗ್ರಾಮದ ಒಂದೊಂದು ಕುಟುಂಬವು ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗವನ್ನು ಸೇವಾರ್ಥದಾರರಾಗಿ ನೆರವೇರಿಸಿದರು.
ಸೋಮವಾರ 48ನೇ ದಿನದ ಮಂಡಲ ವಿಶೇಷ ಪೂಜಾ ಕಾರ್ಯಕ್ರಮವು ಜರುಗಿತು. ಗಣಪತಿ ಹೋಮ, 101 ಕಳಸಗಳ ಪೂಜೆ, ಮಹಾರುದ್ರಾಭಿಷೇಕ, ಅಷ್ಟೋತ್ತರ ಪೂಜೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಸವ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಗ್ರಾಮದ ಗೌಡಿಕೆ ಶಿವಮಲ್ಲಪ್ಪ, ಶಿವರಾಜಪ್ಪ, ಮುಖಂಡರಾದ ಪ್ರಭುಸ್ವಾಮಿ, ಮಹದೇವಪ್ಪ, ಗುರುಸ್ವಾಮಿ, ಗುರುಮೂರ್ತಿ, ಗುರು, ಎನ್. ಪಿ.ನಾಗರಾಜಪ್ಪ, ಶಿವಕುಮಾರ್, ಶಿಕ್ಷಕರಾದ ಪರಶಿವಮೂರ್ತಿ, ಮಹೇಶ್, ಕುಮಾರ, ರವಿ, ಮಹೇಂದ್ರ, ಮೋಹನ್, ಪ್ರಕಾಶ್, ಮಹೇಶ್, ನವೀನ್ ಕುಮಾರ್, ಸುರೇಶ, ಮಂಜುನಾಥ, ಯೋಗೇಶ್, ಮಹದೇವಪ್ಪ, ಮೋಹನ್, ಸತೀಶ್, ಶಂಭುಲಿಂಗಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ನಂಜೀಪುರದ ಹೇಮೇಶ್ ಚಿಲಾಳ ಮತ್ತು ತಂಡದವರಿಂದ ವಿವಿಧ ಕಾರ್ಯಕ್ರಮಗಳು ನೆರವೇರಿದವು.