ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಮನೆಯ ಪಕ್ಕದಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಮಹದೇವ ಎಂಬಾತನನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. 
ಮೈಸೂರು

ಗಾಂಜಾ ಗಿಡ ಬೆಳೆದಿದ್ದವನ ಸೆರೆ

ನಾಗೇಶ ಎಸ್
ಕೆ.ಆರ್.ನಗರ: ಮನೆಯ ಪಕ್ಕದಲ್ಲಿಯೇ ಗಾಂಜಾ ಗಿಡಗಳನ್ನು ಬೆಳೆಸಿದ್ದ ತಾಲೂಕಿನ ಹೆಬ್ಬಾಳು ಗ್ರಾಮದ ಮಹದೇವ ಎಂಬಾತನನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ಅಬಕಾರಿ ಜಂಟಿ ಆಯುಕ್ತ, ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತರ ಆದೇಶದಂತೆ ಹುಣಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಶುಕ್ರವಾರ ಮಾಹಿತಿದಾರನು ನೀಡಿದ ಖಚಿತ ಮಾಹಿತಿಯ ಮೇರೆಗೆ ಹೆಬ್ಬಾಳು ಗ್ರಾಮದ ಮಹಾದೇವ ಅವರ ಮನೆಗೆ ದಾಳಿ ಮಾಡಲಾಗಿದೆ. ದಾಳಿಯಲ್ಲಿ ಹೆಬ್ಬಾಳು ಗ್ರಾಪಂ ಪಿಡಿಒ ನೇತ್ರಾವತಿ, ಕೆ.ಆರ್.ನಗರ ವಲಯ ಕಚೇರಿಯ ಅಬಕಾರಿ ಉಪನಿರೀಕ್ಷಕ ಎನ್.ದಿನೇಶ, ಮುಖ್ಯಪೇದೆ ಕೆ.ಪಿ.ಶಿವಕುಮಾರ, ಪೇದೆ ಶಿವಪ್ಪ ಭಾನುಸಿ, ಚಾಲಕ ಕೆ.ಮಹದೇವ ಹಾಜರಿದ್ದರು.