ಸರಗೂರಿನ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ರಚನೆ ಮಾಡಲಾಯಿತು. ಉಯ್ಯಂಬಳ್ಳಿ ಮಲ್ಲಿಕಾರ್ಜುನ, ದೊಡ್ಡಸಿದ್ದು, ಸಣ್ಣಸ್ವಾಮಿ, ಶಿವಶಂಕರ್, ಗೋವಿಂದರಾಜು ಇತರರು ಇದ್ದರು. 
ಮೈಸೂರು

ದಸಂಸ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಉಸ್ತುವಾರಿ

ಸರಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ದಲಿತ ಸಂಘರ್ಷ ಸಮಿತಿ ಒಕ್ಕೂಟ ರಚನೆ ಸಭೆಯಲ್ಲಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಅವರನ್ನು ತಾಲೂಕು ಒಕ್ಕೂಟದ ಉಸ್ತುವಾರಿಯಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಜಿಲ್ಲಾ ಸಂಘಟನಾ ಸಂಚಾಲಕರು, ತಾಲೂಕು ಸಂಚಾಲಕರು ಹಾಗೂ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸಹಕಾರ ಹಾಗೂ ಅಭಿಪ್ರಾಯ ಮಂಡಿಸಿದರು.
ನೂತನ ಒಕ್ಕೂಟ ಉಸ್ತುವಾರಿ ಉಯ್ಯಂಬಳ್ಳಿ ಮಲ್ಲಿಕಾರ್ಜುನ ಮಾತನಾಡಿ, ಸಮಾಜ ಹಾಗೂ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಒಗ್ಗೂಡಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರು ಮತ್ತು ತಾಲೂಕು ಸಂಚಾಲಕರ ಸಹಕಾರ ಸಲಹೆ ಪಡೆದು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಸಮಾಜದ ಹಿತಾಸಕ್ತಿಗೆ ಸಂಘಟನೆಯು ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ರಚಿಸಿರುವ ಸಂವಿಧಾನವನ್ನು ಗೌರವಿಸುವ ಜತೆಗೆ ರಕ್ಷಿಸುವ ಕೆಲಸವನ್ನು ಒಕ್ಕೂಟದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದು ಕರೆ ನೀಡಿದರು.
ದಸಂಸ ಜಿಲ್ಲಾ ಸಂಚಾಲಕರಾದ ದೊಡ್ಡಸಿದ್ದು, ಎಸ್.ಡಿ.ಸಣ್ಣಸ್ವಾಮಿ, ಶಿವಶಂಕರ ದೇವಲಾಪುರ, ಗೋಪಾಲ್ ಬಿಡುಗಲು, ಹುನಗಹಳ್ಳಿ ಗೋವಿಂದ, ತಾಲೂಕು ಸಂಚಾಲಕರಾದ ಮಹೇಶ್ ಕುಮಾರ್ ದೇವಲಾಪುರ, ಕೂಡಗಿ ಗೋವಿಂದ ರಾಜು, ಚಂದ್ರ, ಅಣ್ಣಯ್ಯ ಸ್ವಾಮಿ ಕಂದೇಗಾಲ, ನಾಗಣ್ಣ ಹಳೆಯೂರು, ಹುಚ್ಚಯ್ಯ, ಶಿವಕುಮಾರ್, ರಮೇಶ, ಚಿಕ್ಕಣ್ಣ ಇಟ್ನ, ಸೋಮೇಶ್ ನೇರಳೆ, ಚಿನ್ನಯ್ಯ, ಪುಟ್ಟ, ಕಾರಯ್ಯ, ಪುಟ್ಮಮಾದು, ಮಹದೇವಸ್ವಾಮಿ, ದೇವಣ್ಣ, ಜಿಲೇಂದ್ರ, ಕೃಷ್ಣ, ದೇವರಾಜು, ಮಂಜು ಇತರರು ಇದ್ದರು.