ಬೆಟ್ಟದಪುರ ಬಸವೇಶ್ವರ ಕಾಲೋನಿಯ ಅಂಗನವಾಡಿಯ ಪುಟಾಣಿ ಮಕ್ಕಳಿಗೆ ರೈತರು ಜಮೀನಿನಲ್ಲಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಪರಿಚಯಿಸಲಾಯಿತು. ಪೂರ್ಣಿಮಾ, ರಾಣಿ, ಪವಿತ್ರಾ, ಮಮತಾ, ಪಾಲಕರು ಇದ್ದರು. 
ಮೈಸೂರು

ಪುಟಾಣಿಗಳಿಂದ ಮಕರ ಸಂಕ್ರಾಂತಿಯ ಸಂಭ್ರಮ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಅಂಗನವಾಡಿಯಲ್ಲಿ ಮಕರ ಸಂಕ್ರಾಂತಿ ಹಬ್ಬ
ಬೆಟ್ಟದಪುರ: ಬೆಟ್ಟದಪುರದ ಬಸವೇಶ್ವರ ಕಾಲೋನಿ ಅಂಗನವಾಡಿಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಇತ್ತೀಚೆಗೆ ಸಂಭ್ರಮದಿಂದ ಪುಟಾಣಿಗಳು ಆಚರಣೆ ಮಾಡಿದರು.
ಹಬ್ಬದ ಪ್ರಯುಕ್ತ ಹೆಣ್ಣು ಮಕ್ಕಳು ರೇಷ್ಮೆ ಲಂಗ-ದವಣಿ ತೊಟ್ಟು, ತಲೆಗೆ ಹೂ ಮುಡಿದು ಮಿಂಚಿದರು. ಗಂಡು ಮಕ್ಕಳು ಪಂಚೆ-ಶರ್ಟ್, ಕುರ್ತಾ-ಪೈಜಾಮ ಧರಿಸಿದ್ದರು. ಇದೆ ವೇಳೆ ಎಳ್ಳು ಬೆಲ್ಲವನ್ನು ಎಲ್ಲರಿಗೂ ಹಂಚಿ ಶುಭಾಶಯ ವಿನಿಯೋಗ ಮಾಡಿಕೊಂಡರು. ಸುಗ್ಗಿ ಹಬ್ಬದ ಪ್ರಯುಕ್ತ ರೈತರ ಜಮೀನುಗಳಿಗೆ ಪುಟಾಣಿ ಮಕ್ಕಳಿಗೆ ಕಣದಲ್ಲಿ ರಾಗಿ ಹದ ಮಾಡುವ, ಹಾಗೂ ಕೊಯ್ಲು ಕುಯ್ಯುವ ವಿಚಾರದ ಬಗ್ಗೆ ಭತ್ತ ಕುಟ್ಟುವುದು , ತರಕಾರಿ, ಹೂಗಳು ಬೆಳೆಗಳ ಬಗ್ಗೆ, ರೈತರು ಉಳುಮೆ ಮಾಡಲು ಬಳಸುವ ಸಾಧನಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು.
ಅಂಗನವಾಡಿ ಕಾರ್ಯಕರ್ತರಾದ ಪೂರ್ಣಿಮಾ, ರಾಣಿ, ಪವಿತ್ರಾ, ಮಮತಾ ಹಾಗೂ ಪಾಲಕರು ಭಾಗವಹಿಸಿದ್ದರು.