ಮೂಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ ಮಹದೇವಸ್ವಾಮಿ ಹಾಗೂ ಉಪಾಧ್ಯಕ್ಷ ಮುದ್ದರಾಮ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. 
ಮೈಸೂರು

ಮೂಗೂರು ಡೇರಿಗೆ ಮಹದೇವಸ್ವಾಮಿ ಅಧ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಮೂಗೂರು ಹಾಲು ಉತ್ಪಾದಕರ ಸಹಕಾರ ಸಂಘ
  • ಅಧ್ಯಕ್ಷರಾಗಿ ಮಹದೇವಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಮುದ್ದರಾಮ ಶೆಟ್ಟಿ
ಮೂಗೂರು: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಹದೇವಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಮುದ್ದರಾಮ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಕಚೇರಿ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಡೇರಿ ಸಿಇಒ ಎಂ.ನಾಗೇಂದ್ರ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದ ಸ್ಥಳೀಯ ಮುಖಂಡ ಎಂ.ಡಿ.ಬಸವರಾಜು, ಸಚಿವ ಮಹದೇವಪ್ಪ ಅವರ ಶ್ರಮದ ಫಲವಾಗಿ ಗ್ರಾಮಕ್ಕೆ ಡೇರಿ ಮಂಜೂರಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರ ಹಾಗೂ ಪಶು ಸಂಗೋಪನೆ ಸಚಿವರ ಅನುಗ್ರಹದಿಂದ ಮೂಗೂರು ಗ್ರಾಮಕ್ಕೆ ಬಿಎಂಸಿ ಕೇಂದ್ರ ಮಂಜೂರು ಆಯಿತು. ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಯಬೇಕಿದೆ ಎಂದರು.
ಡೇರಿ ಮಾಜಿ ಅಧ್ಯಕ್ಷ ಎಂ.ಎಂ. ಬಸವಣ್ಣ, ನಿರ್ದೇಶಕರಾದ ಮಹದೇವನಾಯ್ಕ. ಮಾದೇಗೌಡ, ಇಸಾಕ್, ಹೊನ್ನೂರು ರಂಗಯ್ಯ, ಮಲ್ಲೇಶ್, ಜ್ಯೋತಿ, ಲಿಂಗರಾಜ್, ಸತೀಶ್, ಚಿಕ್ಕಮ್ಮ, ಮುಖಂಡರಾದ ಎಂ.ನಾಗರಾಜು, ಕಿರಣ್, ಶಿವಮೂರ್ತಿ, ಮಾದಪ್ಪ, ನಾಗರಾಜಪ್ಪ, ಶೇಖರ್, ಪುಟ್ಟರಾಜ ನಾಯ್ಕ, ಪುಟ್ಟರಾಜ ನಾಯ್ಕ, ರಂಗಸ್ವಾಮಿ, ಮೂರ್ತಿ, ಗುರುಸ್ವಾಮಿ, ಕುಮಾರ, ಮಹೇಶ್ ಇತರರು ಇದ್ದರು.