ನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಗೋವಿಂದರಾಜು, ಪ್ರೊ.ಎನ್.ಕೆ.ಲೋಕನಾಥ್, ರಾಘವನ್ ಅವರನ್ನು ಪ್ರೊ.ಡಾ.ಭಾಷ್ಯಂ ಸ್ವಾಮಿ ಆಶೀರ್ವದಿಸಿದರು. ಎನ್.ಶ್ರೀನಿವಾಸನ್ ಇದ್ದರು. 
ಮೈಸೂರು

ಶ್ರೀ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಮಹಾ ಸುದರ್ಶನ ಹೋಮ

ನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಯ ಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಅಖಂಡ ಮಹಾ ಸುದರ್ಶನ ಹೋಮ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ದೇವಾಲಯದ ಸಂಸ್ಥಾಪಕ ನಾಡೋಜ ಪ್ರೊ.ಡಾ.ಭಾಷ್ಯಂ ಸ್ವಾಮಿ, ಪ್ರಧಾನ ಅರ್ಚಕರಾದ ಶೇಷಾದ್ರಿ ಹಾಗೂ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಅವರ ಸಮ್ಮುಖದಲ್ಲಿ ನಡೆದ ಅಖಂಡ ಮಹಾ ಸುದರ್ಶನ ಹೋಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ತದನಂತರ ಮಹಿಳಾ ಸಂಘದವರಿಂದ ವಿಷ್ಣು ಸಹಸ್ರನಾಮ ಪಾರಾಯಣ ಜರುಗಿತ್ತಲ್ಲದೆ, ಬಳಿಕ ಪೂರ್ಣಾಹುತಿ ನಡೆದು ದೇವಾಲಯಕ್ಕೆ ಆಗಮಿಸಿದ್ದ ಎಲ್ಲ ಭಕ್ತರಿಗೂ ಪ್ರಸಾದದ ರೂಪದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು.
ಡಾ.ರಾಜ್‌ಕುಮಾರ್ ಅವರ ಅಳಿಯ ಗೋವಿಂದರಾಜು, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ರಘುಲಾಲ್ ಕಂಪನಿಯ ಮುಖ್ಯಸ್ಥ ರಾಘವನ್, ಚಾಮುಂಡಿ ಬೆಟ್ಟದ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಚಾರ್ಟರ್ಡ್ ಅಕೌಂಟೆಂಟ್ ಲಕ್ಷ್ಮೀಶ್ ಸೇರಿದಂತೆ ಸಾಕಷ್ಟು ಗಣ್ಯರು, ಹಿರಿಯರು ದೇವಾಲಯಕ್ಕೆ ಆಗಮಿಸಿ, ಮಹಾ ಸುದರ್ಶನ ಹೋಮದಲ್ಲಿ ಪಾಲ್ಗೊಂಡು ಪ್ರಸಾದ ಪಡೆದರು.