ಮೈಸೂರು: ಕೇರಳದ ತಿರುವನಂತಪುರಂನಲ್ಲಿ ಜ.28ರಿಂದ ಫೆಬ್ರವರಿ 1ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ 46ನೇ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಗರದ ಮಾಸ್ಟರ್ಸ್ ಅಥ್ಲೀಟ್, ಕನ್ನಡ ರಾಜೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಯೋಗೇಂದ್ರ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
60 ವರ್ಷ ಮೇಲ್ಪಟ್ಟವರ ವಿಭಾಗದ ಮೀಟರ್ಸ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಓಡಲಿದ್ದಾರೆ. 47 ವರ್ಷಗಳಿಂದ ಅಥ್ಲೆಟಿಕ್ಸ್‌ನಲ್ಲಿ ದೂರದ ಓಟಗಾರರಾಗಿ ಗುರುತಿಸಿಕೊಂಡಿರುವ ಯೋಗೇಂದ್ರ, ಈವರೆಗೆ ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ 60ಕ್ಕೂ ಹೆಚ್ಚು ಚಿನ್ನ, 50 ಬೆಳ್ಳಿ ಹಾಗೂ 48 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
2016ರಲ್ಲಿ ಚೀನಾದಲ್ಲಿ ನಡೆದ 20ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 2 ಕಂಚು ಹಾಗೂ 2014ರಲ್ಲಿ ಜಪಾನ್‌ನಲ್ಲಿ ನಡೆದ 19ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ರಿಲೇನಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.