ವಾಲ್ಮೀಕಿ ನಾಯಕರ ಸಂಘದ ವತಿಯಿಂದ ನುಡಿನಮನ ಕಾರ್ಯಕ್ರಮ ನಡೆಯಿತು. ರುಕೀಯಾ ಬೇಗಂ, ಸಿ.ಸಿ.ಮದೇವ್ ಇತರರು ಇದ್ದರು.
ಸಾಲಿಗ್ರಾಮ: ಹುಟ್ಟು, ಸಾವು ಪ್ರಕೃತಿ ನಿಯಮ. ಅದರ ಮಧ್ಯ ಮನುಷ್ಯ ಬದುಕಿದ ದಿನಗಳಲ್ಲಿ ಪ್ರೀತಿ, ವಿಶ್ವಾಸ, ಬಾಂಧವ್ಯಗಳ ನೆನಪಿಗಾಗಿ ನುಡಿ ನಮನ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಹಸೀಲ್ದಾರ್ ರುಕಿಯಾ ಬೇಗಂ ತಿಳಿಸಿದರು.
ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಬದುಕುವ ದಿನಗಳಲ್ಲಿ ಅವನ ಸಾಧನೆ, ನಡವಳಿಕೆ ಹಾಗೂ ಪ್ರೀತಿ, ವಿಶ್ವಾಸ ಎಲ್ಲರ ಗಮನ ಸೆಳೆಯುವಂತ ಸಂದರ್ಭಗಳು. ಅವರ ಜೀವನ ಚರಿತ್ರೆಯನ್ನು ನೆನಪಿಸುವ ಮೂಲಕ ಬೇರೆಯವರಿಗೆ ಮಾದರಿ ಮಾಡಲು ಹಮ್ಮಿಕೊಂಡಿರುವ ಕಾರ್ಯಕ್ರಮ ಬಹುದೊಡ್ಡ ಬೆಳವಣಿಗೆ. ನಮ್ಮ ಜೀವನದಲ್ಲಿ ನಾವು ಮಾಡಿದ ಆಸ್ತಿ, ಅಂತಸ್ತು ನಮ್ಮ ಜತೆ ಬರುವುದಿಲ್ಲ. ಆದರೆ ನಾವು ಸಂಪಾದನೆ ಮಾಡಿದ ಪ್ರೀತಿ, ವಿಶ್ವಾಸ ಮಾತ್ರ ಕೊನೆಯವರೆಗೆ ಉಳಿಯಲಿದೆ ಎಂದರು.
ವಾಲ್ಮೀಕಿ ತಾಲೂಕು ಸಂಘದ ನಿರ್ದೇಶಕರಾಗಿ ಸಮಾಜದ ಪ್ರೀತಿ ವಿಶ್ವಾಸವನ್ನು ಗೆದ್ದಂತಹ ಸಣ್ಣನಿಂಗನಾಯಕ, ಶಿಕ್ಷಣ ಇಲಾಖೆಯ ಬೋಜನಾಯಕ, ಕಂದಾಯ ಇಲಾಖೆಯ ತಿಮ್ಮಯ್ಯನಾಯಕ ಇವರಿಗೆ ನುಡಿನಮನ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಮಹದೇವ್ ಸಿ.ಸಿ. ಮಾತನಾಡಿದರು. ಉಪಾಧ್ಯಕ್ಷ ತಂದ್ರೆ ವೆಂಕಟೇಶ ನಾಯಕ, ಕಾರ್ಯದರ್ಶಿ ಕಾಳಮ್ಮನ ಕೊಪ್ಪಲು ಲೋಕೇಶ್, ಖಜಾಂಚಿ ಹೊಸೂರು ಸಂತೋಷ್, ಸಹಕಾರ್ಯದರ್ಶಿ ಬೈರೇಶ್, ಗೋಬಿಶಂಕರ್, ಮಲ್ಲಿಕಾರ್ಜುನ್, ಕುಮಾರ್, ಶಿಕ್ಷಕ ಸುರೇಶ್, ರೊಪ್ಪರಮೇಶ್, ಶ್ಯಾಬಾಳು ಸ್ವಾಮಿನಾಯಕ, ಮಂಜುನಾಥ್, ಮಿರ್ಲೆ ವೆಂಕಟೇಶ್, ಫೈನಲ್ಸ್ ಮದೇವ್, ದಿನೇಶ್, ರಾಂಪುರ ಬಡಾವಣೆ ಚಂದ್ರನಾಯಕ, ರಾಮು, ಕುಬೇರ, ರಾಮನಾಯಕ, ಸುಕನ್ಯಾ, ಸರೋಜಮ್ಮ, ಮಹಿಳಾ ಸಂಘದ ಅಧ್ಯಕ್ಷೆ ಶೋಭಾ, ಶಿವಮ್ಮ, ಗೀತಾಮಂಜು, ಮೋಹನ್ ಇದ್ದರು.