ಪಿರಿಯಾಪಟ್ಟಣದ ಶ್ರೀ ಮಹದೇಶ್ವರ ಸ್ವಾಮಿ ಚಿತ್ರಮಂದಿರಕ್ಕೆ ‘ಲೋ ನವೀನ’ ಚಿತ್ರತಂಡ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ನಟ ನವೀನ್ ಸಜ್ಜು, ನಾಯಕಿ ವರ್ಷಾ ಇತರರಿದ್ದರು. 
ಮೈಸೂರು

ಪಿರಿಯಾಪಟ್ಟಣಕ್ಕೆ ‘ಲೋ ನವೀನ’ ಚಿತ್ರತಂಡ ಭೇಟಿ

ಪಿರಿಯಾಪಟ್ಟಣ: ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿರುವ ಕನ್ನಡ ಚಲನಚಿತ್ರ ‘ಲೋ ನವೀನ’ ಚಿತ್ರತಂಡ ಗುರುವಾರ ಸಂಜೆ ಪಿರಿಯಾಪಟ್ಟಣಕ್ಕೆ ಭೇಟಿ ನೀಡಿತ್ತು.
ಪಟ್ಟಣದ ಶ್ರೀ ಮಹದೇಶ್ವರ ಸ್ವಾಮಿ ಚಿತ್ರಮಂದಿರಕ್ಕೆ ಚಿತ್ರದ ನಾಯಕ ನವೀನ್ ಸಜ್ಜು, ನಾಯಕಿ ವರ್ಷಾ ಆಗಮಿಸಿದ್ದರು. ಚಿತ್ರತಂಡ ಭೇಟಿ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳು ಚಿತ್ರಮಂದಿರದ ಬಳಿ ಜಮಾಯಿಸಿದ್ದರು. ನಟರು ಬರುತ್ತಿದ್ದಂತೆ ಶಿಳ್ಳೆ, ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಅವರೊಂದಿಗೆ ಕೈಕುಲುಕಿ ಸಂಭ್ರಮಿಸಿದರು. ಸೆಲ್ಫಿ ತೆಗೆದುಕೊಂಡರು. ಬಳಿಕ ಪ್ರೇಕ್ಷಕರ ಜತೆ ತಂಡದ ಸದಸ್ಯರು ಚಲನಚಿತ್ರ ವೀಕ್ಷಿಸಿದರು.
ಚಿತ್ರವು ಆಧುನಿಕ ಕಾಲದ ಕನ್ನಡ ಹಾಸ್ಯ ಮತ್ತು ಪ್ರೇಮಕಥೆಯ ಜತೆಯಲ್ಲಿ ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದೆ. ಚಿತ್ರ ಬಿಡುಗಡೆಯಾಗಿ ಹದಿನೈದು ದಿನಗಳಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದರು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಇತರರಿದ್ದರು.