* ಎಚ್.ಡಿ. ಕೋಟೆಯಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ  
ಮೈಸೂರು

ಪ್ರಮಾಣ ವಚನ ಸ್ವೀಕಾರ ಸಮಾರಂಭ ನೇರಪ್ರಸಾರ

ಎ. ಆರ್. ರಘುರಾಮ
ಎಚ್.ಡಿ. ಕೋಟೆ : ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಜೂ.3 ರಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಇದರ ನೇರಪ್ರಸಾರವನ್ನು ಪಟ್ಟಣದಲ್ಲಿ ದೊಡ್ಡ ಎಲ್‌ಇಡಿ ಪರದೆ ಮೇಲೆ ಬಿತ್ತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಒಕ್ಕಲಿಗ ಸಮುದಾಯದ ಮುಖಂಡ ಯರಳ್ಳಿ ಸೂರ್ಯಕುಮಾರ್ ಗೌಡ ತಿಳಿಸಿದರು.
ಕಾಂಗ್ರೆಸ್ ಪಕ್ಷವು ಈ ಬಾರಿ ಒಕ್ಕಲಿಗ ಸಮುದಾಯದ ಮುಖಂಡರಿಗೆ ಮುಖ್ಯಮಂತ್ರಿ ಸ್ಥಾನ ನೀಡಿರುವುದು ಸಂತಸದ ವಿಚಾರ. ಹಾಗಾಗಿ ಪ್ರಮಾಣ ವಚನ ಸ್ವೀಕಾರ ದಿನ ಸಾವಿರಾರು ಜನರಿಗೆ ಸಿಹಿ ವಿತರಣೆ ಮಾಡಲಾಗುವುದು.
ಪಕ್ಷದ ಮುಖಂಡರು, ಅಭಿಮಾನಿಗಳು ಮತ್ತು ಒಕ್ಕಲಿಗ ಸಮುದಾಯದ ಕಾರ್ಯಕರ್ತರು ಒಟ್ಟಾಗಿ ಒಂದೆಡೆ ಸೇರುವಂತೆ ಮಾಡಲು ಮತ್ತು ನೇರ ಪ್ರಸಾರದ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು. ಒಕ್ಕಲಿಗ ಸಮುದಾಯವು ಸಮಾಜದ ಎಲ್ಲ ಆಗು ಹೋಗುಗಳಿಗೆ ಮೊದಲಿನಿಂದಲೂ ಸ್ಪಂದಿಸುತ್ತಿದೆ. ನೂತನ ಮುಖ್ಯಮಂತ್ರಿಯ ಆಡಳಿತಕ್ಕೂ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಮುಖಂಡರಾದ ನಾಗೇಶ್, ಚುಂಚೇಗೌಡ, ದಿಲೀಪ್, ವಿಜಯಕುಮಾರ್ ಇದ್ದರು.