ತಿ.ನರಸೀಪುರ ತಾಲೂಕಿನ ವಾಟಾಳು ಮಠದಲ್ಲಿ ಆಯೋಜಿಸಿದ್ದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ವರ್ಧಂತಿ ಕಾರ್ಯಕ್ರಮದಲ್ಲಿ ತಾಲೂಕು ಬಾಬು ಜಗಜೀವನ ರಾಮ್ ಸಂಘದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಅರ್ಜುನ್ ಸಿ.ರಮೇಶ್, ಸಿ.ಡಿ.ವೆಂಕಟೇಶ್, ಜಿ.ಎನ್.ಪುಟ್ಟಸ್ವಾಮಿ, ಸಿ.ನಿಂಗರಾಜು ಇತರರು ಇದ್ದರು.
- ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬಿಡುಗಡೆ
ತಿ.ನರಸೀಪುರ: ತಾಲೂಕು ಡಾ.ಬಾಬು ಜಗಜೀವನರಾಮ್ ಸಂಘದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ತಾಲೂಕಿನ ವಾಟಾಳು ಮಠದ ಆವರಣದಲ್ಲಿ ಇತ್ತೀಚೆಗೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸಂಘದ ಅಧ್ಯಕ್ಷ ಅರ್ಜುನ್ ಸಿ.ರಮೇಶ್ ಬಿಡುಗಡೆ ಮಾಡಿದರು.
ಜನ್ಮ ದಿನೋತ್ಸವ ಆಚರಿಸಿಕೊಂಡ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳಿಗೆ ಪದಾಧಿಕಾರಿಗಳೊಂದಿಗೆ ಗುರುವಂದನೆ ಸಲ್ಲಿಸಿ, ಶುಭ ಕೋರಿ ಆಶೀರ್ವಾದ ಪಡೆದ ಬಳಿಕ ಪದಾಧಿಕಾರಿಗಳ ಆಯ್ಕೆಯನ್ನು ಅಂತಿಮಗೊಳಿಸಿದರು.
ಸಿ.ಡಿ.ವೆಂಕಟೇಶ್, ಜಿ.ಎನ್.ಪುಟ್ಟಸ್ವಾಮಿ(ಪ್ರಧಾನ ಕಾರ್ಯದರ್ಶಿಗಳು), ಸಿದ್ದರಾಜು(ಖಜಾಂಚಿ), ವಿಜಾಪುರ ಶಿವಶಂಕರ್, ಮಲಿಯೂರು ಸಿದ್ದಯ್ಯ, ಕೆ.ರಾಜು, ತಲಕಾಡು ಸುಂದರ್, ಹೊಸಹಳ್ಳಿ ಚಿನ್ನಸ್ವಾಮಿ, ರಂಗರಾಜಪುರ ಸುನೀಲ್(ಉಪಾಧ್ಯಕ್ಷರು), ವಿ.ಎಸ್.ಶಿವಕುಮಾರ್(ಸಂಘಟನಾ ಕಾರ್ಯದರ್ಶಿ), ರಾಜಪ್ಪ, ಹುಣಸೂರು ಸಿ.ನಿಂಗರಾಜು, ಕಾಂತರಾಜು, ಸಿದ್ದನಹುಂಡಿ ಗೋಪಿ, ಬಾಲರಾಜು(ಕಾರ್ಯದರ್ಶಿಗಳು), ಗೋಪಾಲಪುರ ಶ್ರೀನಿವಾಸ್(ಸಾಮಾಜಿಕ ಜಾಲತಾಣ), ತಲಕಾಡು ಮಹದೇವ್(ಮಾಧ್ಯಮ ಸಲಹೆಗಾರ), ಸಿದ್ದನಹುಂಡಿ ರಂಗರಾಜು, ನಾಗಮ್ಮ (ಕಾನೂನು ಸಲಹೆಗಾರರು), ಮಹೇಶ್, ವ್ಯಾಸರಾಜಪುರ ಜ್ಞಾನೇಂದ್ರ, ಬನ್ನೂರು ಸುಮಿತ್ರಾ, ಸುನೀಲ್, ಮೂಗೂರು ಸಿದ್ದರಾಜು, ಮಹದೇವಸ್ವಾಮಿ, ಬಿ.ರಾಜೇಂದ್ರ ಪ್ರಸಾದ್, ಜಯರಾಮು, ರಂಗಸ್ವಾಮಿ, ಕೆಂಚಪ್ಪ, ಹೊಸ ನರೀಪುರ ಲಿಂಗರಾಜು, ಗೋವಿಂದ, ನಿಂಗಯ್ಯ, ಸೋಮಣ್ಣ, ರವಿ, ರಾಚಯ್ಯ, ರಮೇಶ್, ಕೆಂಪರಾಜು, ನಾಗಣ್ಣ, ದೇವರಾಜು, ರೇವಣ್ಣ, ರವಿ, ಮನು, ಪ್ರಸಾದ್ (ನಿರ್ದೇಶಕರು) ಅವರನ್ನು ನೇಮಕ ಮಾಡಲಾಗಿದೆ.
ಬಳಿಕ ಆರ್.ಅರ್ಜುನ್ ಮಾತನಾಡಿ, ಸರಳ - ಸಜ್ಜನಿಕೆ ವ್ಯಕ್ತಿತ್ವದಿಂದಲೆ ತಾಲೂಕಿನ ಎಲ್ಲ ಜನರಿಗೆ ಧಾರ್ಮಿಕ ಗುರುವಾಗಿರುವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನಮಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಜನ್ಮ ದಿನದಂದೇ ತಾಲೂಕು ಬಾಬು ಜಗಜೀವನ ರಾಮ್ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಿ, ಸಂಘಟನೆ ಆರಂಭಿಸುತ್ತಿದ್ದೇವೆ ಎಂದರು.