ಮೈಸೂರು: ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317ರ ಪ್ರಾಂತೀಯ ಸಮ್ಮೇಳನವನ್ನು ಜ.4 ರಂದು ಬೆಳಗ್ಗೆ 8.30ಕ್ಕೆ ವಿದ್ಯಾರಣ್ಯಪುರಂನ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಾಂತೀಯ ಅಧ್ಯಕ್ಷ ಪಿ. ಹೊನ್ನರಾಜು ತಿಳಿಸಿದರು.
ರಂಗಾಯಣ ಮಾಜಿ ನಿರ್ದೇಶಕ ಡಾ.ಎಚ್. ಜನಾರ್ದನ್ ‘ಮಾನವೀಯತೆ ಮೊದಲ ಆದ್ಯತೆ’ ವಿಷಯದ ಕುರಿತು ಮಾತನಾಡುವರು. ಲಯನ್ಸ್ ಸಂಸ್ಥೆಯ ಮಲ್ಟಿಪಲ್ ಕೌನ್ಸಿಲ್ ಮಾಜಿ ಛೇರ‌್ಮನ್ ಡಾ.ಎನ್. ಕೃಷ್ಣೇಗೌಡ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 1.75 ಲಕ್ಷ ಮೊತ್ತದಲ್ಲಿ ಒಟ್ಟು 35 ಕೃತಕ ಕಾಲು ವಿತರಿಸಲಾಗುವುದು. ಸಂತೆ ಸರಗೂರಿನ ಶಾಲಾ ಕಟ್ಟಡ ಅಭಿವೃದ್ಧಿಗೆ 50 ಸಾವಿರ ರೂ. ಚೆಕ್, ಬಡ ಮಹಿಳೆಗೆ ಒಂದು ಹೊಲಿಗೆ ಯಂತ್ರ ವಿತರಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಸಂಸ್ಥೆ ಪದಾಧಿಕಾರಿಗಳಾದ ಜೈಪ್ರಕಾಶ್, ಎಂ.ವಿ. ನಂದೀಶ್, ಸಿ. ಶಂಕರ್ ಹಾಗೂ ಇತರರು ಇದ್ದರು.