ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಸಭೆಯನ್ನು ನಡೆಸಲಾಯಿತು. ಮಹದೇವಸ್ವಾಮಿ, ಸಿಂಧುವಳ್ಳಿ ಕೆಂಪಣ್ಣ ಸೇರಿದಂತೆ ಇತರರು ಇದ್ದರು.
ನಂಜನಗೂಡು: ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಸಭೆ ಗುರುವಾರ ನಗರದಲ್ಲಿ ನಡೆಯಿತು.
ಅಧ್ಯಕ್ಷ ಮಲ್ಕುಂಡಿ ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ಸಂಘಟನೆ, ಮುಂಬರುವ ದಿನಗಳಲ್ಲಿ ಸದಸ್ಯತ್ವ ಅಭಿಯಾನ, ಯುವ ಜನಾಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ತಾಲೂಕು ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ್ ಪಾರ್ಥ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯುವ ಘಟಕದ ಉಪಾಧ್ಯಕ್ಷರಾದ ಸುತ್ತೂರು ಮಹೇಶ್ ಪಟೇಲ್, ಸಣ್ಣಮಲ್ಲಪುರ ಮಹೇಶ್, ಪ್ರಧಾನ ಕಾರ್ಯದರ್ಶಿ ಕಣೆನೂರು ನವೀನ್, ಖಜಾಂಚಿ ಬಸವಟ್ಟಿಗೆ ಚೇತನ್, ಕಾರ್ಯದರ್ಶಿ ಸಿದ್ದಯ್ಯನ ಹುಂಡಿ ಕೀರ್ತಿಕುಮಾರ್, ಮಾದಾಪುರ ಭುವನ್, ಹೆಗ್ಗಡಹಳ್ಳಿ ಸಂಜು ಪಾಟೀಲ್, ಜಿಲ್ಲಾ ಯುವ ಘಟಕದ ಹೂರಳವಾಡಿ ಆದಿ ಪಟೇಲ್ ಮಡುವಿನಹಳ್ಳಿ ರಾಜೇಶ್ ಇತರರು ಇದ್ದರು.