- ತವರು ಮನೆ ಯಿಂದ ಹಣ ತರುವಂತೆ ಆಗಾಗ ಪಿಡಿಸುತ್ತಿದ್ದ
- ಗೌರಿ ಹಬ್ಬಕ್ಕೆ ಬಂದವನು ಜಗಳ ತೆಗೆದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ
ಮೈಸೂರು: ಪತ್ನಿ ಕೊಲೆ ಮಾಡಿದ್ದ ಅಪರಾಧಿಗೆ, ನಗರದ 5ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಪುಟ್ಟಸ್ವಾಮಿ (45) ಶಿಕ್ಷೆಗೆ ಗುರಿಯಾದವ.
ನಂಜನಗೂಡು ತಾಲೂಕು ಕವಲಂದೆಯ ರೂಪಾಳನ್ನು ಪುಟ್ಟಸ್ವಾಮಿ ಮದುವೆಯಾಗಿದ್ದ. ಮದುವೇಳೆ ವರದಕ್ಷಿಣೆ ಪಡೆದಿದ್ದ ಈತ ತವರು ಮನೆ ಯಿಂದ ಹಣ ತರುವಂತೆ ಆಗಾಗ ಪಿಡಿಸುತ್ತಿದ್ದ. ಉಪಟಳ ಹೆಚ್ಚಾದಾಗ ಮುಖಂಡರೊಂದಿಗೆ ರಾಜೀಪಂಚಾಯಿತಿ ಮಾಡಿಸಿ, ಆತನನ್ನು ರಾಮನಗರದಲ್ಲಿ ಕೆಲಸಕ್ಕೆ ಹೋಗುವಂತೆ ಮಾಡಲಾಗಿತ್ತು.
ಗೌರಿ-ಗಣೇಶ ಹಬ್ಬಕ್ಕೆ ಎಂದು 2023ರ ಸೆಪ್ಟೆಂಬರ್‌ನಲ್ಲಿ ಬಂದ ಪುಟ್ಟಸ್ವಾಮಿ, ಸಾಲಮಾಡಿದ್ದು, ಸಾಲ ತೀರಿಸಲು ಒಂದು ಲಕ್ಷ ರೂ. ಅಥವಾ ಮೈಮೇಲಿದ್ದ ಆಭರಣ ಕೊಡುವಂತೆ ಜಗಳ ತೆಗೆದಿದ್ದಾನೆ. ಇದಕ್ಕೆ ರೂಪಾ ಒಪ್ಪದಿದ್ದಾಗ, ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಈ ಕುರಿತು ಕವಲಂದೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಗರದ 5ನೇ ಅಧಿಕ ಜಿಲ್ಲಾ ಸತ್ರ ನ್ಯಾಯಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ಜೆ.ಸೋಮಶೇಖರ ಅವರು, ಅಪರಾಧಿಗೆ ಜೀವಾವಧಿ ಶಿಕ್ಷೆ, ಒಟ್ಟು 15 ಸಾವಿರ ರೂ. ದಂಡ ವಿಧಿಸಿದ್ದಾರೆ.
ಸರ್ಕಾರಿ ಅಭಿಯೋಜಕ ಎ.ಎನ್.ಮಧು ವಾದ ಮಂಡಿಸಿದ್ದರು.