ಚಪ್ಪರದಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆಯಿಂದ ವಿಮೆ ಯೋಜನೆಯ ಚೆಕ್ ನ್ನು ಮಡಿಕೇರಿ ಪ್ರಾದೇಶಿಕ ವ್ಯವಸ್ಥಾಪಕ ಉದಯ ಕುಮಾರ್ ಹಸ್ತಾಂತರಿಸಿದರು.
ಬೆಟ್ಟದಪುರ: ಪ್ರತಿಯೊಬ್ಬರಿಗೂ ವಿಮೆ ಯೋಜನೆಗಳು ಸಾಕಷ್ಟು ಸಹಕಾರಿಯಾಗುವುದರ ಜತೆಗೆ ಪ್ರಮುಖವಾಗಿವೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ವ್ಯವಸ್ಥಾಪಕ ಉದಯಕುಮಾರ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಚಪ್ಪರದಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಚಪ್ಪರದಹಳ್ಳಿ ಶಾಖೆಯಲ್ಲಿ ಶುಕ್ರವಾರ ವಿಮೆ ಯೋಜನೆಯ ಚೆಕ್ ಹಸ್ತಾಂತರಿಸಿ ಮಾತನಾಡಿದ ಅವರು, ಆಧುನಿಕ ಜೀವನದಲ್ಲಿ ದುಡಿಯುವ ವ್ಯಕ್ತಿ ತನ್ನ ಕುಟುಂಬಕ್ಕೆ ಅವಲಂಬಿತನಾಗಿರುತ್ತಾನೆ. ಕೆಟ್ಟ ಸಮಯದಿಂದ ವ್ಯಕ್ತಿಯನ್ನು ಕಳೆದುಕೊಂಡಾಗ ಕುಟುಂಬಕ್ಕೆ ಎಲ್ಲ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ವ್ಯಕ್ತಿ ವಿಮೆ ಯೋಜನೆ ಮಾಡಿಸಿದ್ದರೆ ಅದು ಅವರ ಕುಟುಂಬಕ್ಕೆ ಸಹಕಾರಿಯಾಗಲಿದೆ. ಹಾಗಾಗಿ ಪ್ರತಿಯೊಬ್ಬರೂ ಗ್ರಾಮೀಣ ಬ್ಯಾಂಕ್‌ನಲ್ಲಿ ದೊರೆಯುವ ಪಿಎಂಜೆಜೆಬಿವೈ ಹಾಗೂ ಪಿಎಂಎಸಿಬಿವೈ ಎಂಬ ಕೇಂದ್ರ ಸರ್ಕಾರದ ಮತ್ತು ಕಡಿಮೆ ಮೊತ್ತ ವಿಮೆಗಳಿಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೆ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಬ್ಯಾಂಕಿನ ಗ್ರಾಹಕರು ಹಾಗೂ ಪಿಎಂಜೆಜೆಬಿವೈ ವಿಮೆದಾರರಾದ ಶೋಭಾ ಎಂಬುವರು ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಅವರ ನಾಮನಿರ್ದೇಶನರಾದ ಪತಿ ಪ್ರದೀಪ್ ಅವರಿಗೆ 2 ಲಕ್ಷ ರೂ. ವಿಮೆ ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು. ಶಾಖಾ ವ್ಯವಸ್ಥಾಪಕ ಜಿ.ಮಧುಸೂದನ್, ಸಿಬ್ಬಂದಿ ಜಾದಿ ಸಂದೀಪ್ ಕುಮಾರ್, ಪುನೀತ್ ಗ್ರಾಮಸ್ಥರು ಇದ್ದರು.