ನಗರದ ವಿದ್ಯಾವಿಕಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿ.ಕವೀಶ್‌ಗೌಡ, ಪ್ರೊ.ರಹಮತ್ ತರೀಕೆರೆ, ಪ್ರೊ.ಎಸ್.ನರೇಂದ್ರಕುಮಾರ್, ಡಾ.ಡಿ.ಪರಶುರಾಮ ಅವರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. 
ಮೈಸೂರು

ಶಿಕ್ಷಣ ಶೋಷಣೆ ನಿವಾರಿಸುವ ಚಿಂತನೆ ಬೆಳೆಸಲಿ: ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣವು ವ್ಯಕ್ತಿಯನ್ನುಜವಾಬ್ದಾರಿಂುುತ ನಾಗರಿಕನನ್ನಾಗಿ ರೂಪಿಸಬೇಕು
  • ಕೇವಲ ಪುಸ್ತಕಗಳಲ್ಲಿನ ಮಾಹಿತಿ ಸಂಗ್ರಹಿಸುವುದೇ ಶಿಕ್ಷಣ ಆಗಬಾರದು
ಮೈಸೂರು:ಸವಾಜದಲ್ಲಿನ ಅಸವಾನತೆ, ಶೋಷಣೆ ಹಾಗೂ ಅನ್ಯಾಂುವನ್ನು ಅರಿತು ಅದನ್ನು ನಿವಾರಿಸುವ ಚಿಂತನೆ ಶಿಕ್ಷಣದಿಂದಲೇ ಬೆಳೆಂುಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ನಗರದ ವಿದ್ಯಾವಿಕಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮತ್ತು ಶಿಕ್ಷಣ ತಾತ್ವಿಕತೆ ವಿಷಯ ಕುರಿತ ಉಪನ್ಯಾಸ ನೀಡಿದರು.
ಶಿಕ್ಷಣವು ವ್ಯಕ್ತಿಯನ್ನುಜವಾಬ್ದಾರಿಂುುತ ನಾಗರಿಕನನ್ನಾಗಿ ರೂಪಿಸಬೇಕು. ಸಮಾಜದಲ್ಲಿನ ಅಸವಾನತೆ, ಶೋಷಣೆ ಹಾಗೂ ಅನ್ಯಾಂುವನ್ನು ಅರಿತು ಅದನ್ನು ನಿವಾರಿಸುವ ಚಿಂತನೆ ಬೆಳೆಂುಬೇಕು. ಜ್ಞಾನವು ಸವಾಜಮುಖಿಂಾಗಿದ್ದಾಗ ವಾತ್ರ ಅದರ ನಿಜವಾದ ಉದ್ದೇಶ ಸಾಕಾರವಾಗುತ್ತದೆ ಎಂದು ಹೇಳಿದರು.
ಕೇವಲ ಪುಸ್ತಕಗಳಲ್ಲಿನ ವಾಹಿತಿಂುನ್ನು ಸಂಗ್ರಹಿಸುವುದೇ ಶಿಕ್ಷಣ ಆಗಬಾರದು. ಸುತ್ತಮುತ್ತಲ ವಾಸ್ತವತೆಗಳನ್ನು ಅರ್ಥವಾಡಿಕೊಳ್ಳುವ ಹಾಗೂ ಅಸವಾನತೆ ಮತ್ತು ಅನ್ಯಾಂುವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಸಾಧನವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಂರ್ುಕ್ರಮ ಉದ್ಘಾಟಿಸಿದ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಂು ಕಾಂರ್ುದರ್ಶಿ ವಿ.ಕವೀಶ್‌ಗೌಡ ವಾತನಾಡಿ, ಶಿಕ್ಷಣವು ವೈಂುಕ್ತಿಕ ಸಾಧನೆಗೆ ವಾತ್ರ ಸೀಮಿತವಾಗದೆ ಸವಾನತೆ, ಸಾವಾಜಿಕ ನ್ಯಾಂು ಮತ್ತು ವಾನವೀಂು ಮೌಲ್ಯಗಳನ್ನು ಬೆಳೆಸುವ ಸಾಧನವಾಗಬೇಕು. ಅಲ್ಲದೇ ವಿದ್ಯಾರ್ಥಿಗಳು ಅಂಬೇಡ್ಕರ್ ತತ್ವ-ಸಿದ್ಧಾಂತಗಳಿಂದ ಸೃಜನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್ ಮಾತನಾಡಿ, ಅನುಭವಾಧಾರಿತ ಕಲಿಕೆ, ವಿಮರ್ಶಾತ್ಮಕ ಚಿಂತನೆ, ಪ್ರಜಾಸತ್ತಾತ್ಮಕ ಶಿಕ್ಷಣ ಹಾಗೂ ಸವಾಜಮುಖಿ ಶಿಕ್ಷಣದ ಪರಿಕಲ್ಪನೆಗಳು ಅಂಬೇಡ್ಕರ್ ಅವರ ಶಿಕ್ಷಣ ತಾತ್ವಿಕತೆಗೆ ಬಲವಾದ ಅಡಿಪಾಂುವಾಗಿವೆ. ಜಾನ್ ಡ್ಯೂಯಿ ಅವರ ಶಿಕ್ಷಣ ತತ್ವಗಳು ಡಾ. ಅಂಬೇಡ್ಕರ್ ಅವರ ಶಿಕ್ಷಣ ಚಿಂತನೆಗೆ ಬೀರಿದ ಪ್ರಭಾವವನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾ ವಿಕಾಸ ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಪರಶುರಾಮ ವಾತನಾಡಿ, ವಿದ್ಯಾರ್ಥಿಗಳು ಕೇವಲ ವಾಹಿತಿಂುನ್ನು ಕಂಠಪಾಠ ಮಾಡಿದರೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಪ್ರಶ್ನಿಸುವ, ಅನ್ವೇಷಿಸುವ, ವಿಮರ್ಶಾತ್ಮಕವಾಗಿ ಚಿಂತಿಸುವುದರಿಂದ ಜ್ಞಾನ ವಿಕಸಿತಗೊಳ್ಳುತ್ತದೆ ಎಂದು ಹೇಳಿದರು.
ಉಪನ್ಯಾಸಕರಾದ ಡಾ.ಎಂ.ಎನ್. ದಿನೇಶ್, ಡಾ. ವಸಂತಕುವಾರಿ, ಎಚ್.ಎ. ಪ್ರಸನ್ನ ಇತರರು ಇದ್ದರು.