ತಿರುಮಲಾಪುರ ಗ್ರಾಮದಲ್ಲಿ ಅಭಿಮನ್ಯು ಯುವಕ ಸಂಘದ 13ನೇ ವಾರ್ಷಿಕ ಮಹೋತ್ಸವದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು. ರಾಜೇಗೌಡ, ಮಧು, ರಘು, ಶಶಿ, ಕುಮಾರೇಶ್, ರಾಜು, ಮಂಜು ಇತರರಿದ್ದರು. 
ಮೈಸೂರು

ಗ್ರಾಮದ ಏಳಿಗೆಗೆ ಯುವಕರು ಶ್ರಮಿಸಲಿ

ಪ್ರಮುಖ ಮುಖ್ಯಾಂಶಗಳು

  • ತಿರುಮಲಾಪುರದ ರಾಜೇಗೌಡ ಸಲಹೆ
  • ಮಕ್ಕಳಿಗೆ ನೋಟ್ ಬುಕ್ ವಿತರಣೆ

ಬೈಲುಕುಪ್ಪೆ:

ಗ್ರಾಮೀಣ ಭಾಗದ ಯುವಕರು ಒಗ್ಗಟ್ಟಿನಿಂದ ಗ್ರಾಮದ ಏಳಿಗೆಗೆ ಶ್ರಮಿಸಬೇಕು ಎಂದು ರೋಟರಿ ಮಿಡ್ ಟೌನ್ ವಲಯ 6ರ ಪ್ರಾಂತಪಾಲ ತಿರುಮಲಾಪುರದ ರಾಜೇಗೌಡ ಕರೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಭಿಮನ್ಯು ಯುವಕ ಸಂಘದ 13ನೇ ವಾರ್ಷಿಕ ಮಹೋತ್ಸವದಲ್ಲಿ ಮಾತನಾಡಿದರು.
ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇರಬೇಕು. ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದರ ಜತೆಗೆ ಗ್ರಾಮದ ವೃದ್ಧರ ಯೋಗ ಕ್ಷೇಮದ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಮಧು, ಉಪಾಧ್ಯಕ್ಷ ರಘು, ಖಜಾಂಚಿ ಶಶಿ, ಕಾರ್ಯದರ್ಶಿ ಕುಮಾರೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜು, ಶಾಲೆ ಮುಖ್ಯ ಶಿಕ್ಷಕ ಮಂಜು, ಮಣಿ, ರವಿ, ನಾಗೇಶ್, ಹರಿದಾಸ್ ಇತರರು ಇದ್ದರು.