ಪಟ್ಟಣದ ಸಮೀಪದ ಗೆಂಡೆ ಹೊಸಹಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜನ್ಮ ದಿನ ಆಚರಿಸಲಾಯಿತು. ಸಿದ್ದೇಶ್ವರ, ರಘೋತ್ತಮ, ಸುಪ್ರಿಯಾ, ಮಹದೇವಮ್ಮ, ಗೋವರ್ಧನ, ಮಲ್ಲೇಶ್, ಸಾಗರ್, ಹರ್ಷ, ಶಿವಣ್ಣ, ಶಿವಮೂರ್ತಿ, ಮಹೇಶ್, ಲೋಕೇಶ್ ಇದ್ದರು.
ಬನ್ನೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನವನ್ನು ಮೆರವಣಿಗೆ ಮಾಡಿ ಆಚರಣೆ ಮಾಡಿದರೆ ಸಾಲದು, ಬದಲಾಗಿ ಇಂದಿನ ಯುವ ಜನಾಂಗಕ್ಕೆ ಅಂಬೇಡ್ಕರ್ ಅವರ ಜೀವನ ಕುರಿತು ಪರಿಚಯಿಸಬೇಕು ಎಂದು ಎಂಪಿಇಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದೇಶ್ವರ ತಿಳಿಸಿದರು.
ಪಟ್ಟಣದ ಸಮೀಪದ ಗೆಂಡೆಹೊಸಹಳ್ಳಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಡಾ. ಡಾ.ಬಿ.ಆರ್.ಅಂಬೇಡ್ಕರ್ ಬಾಲ್ಯ ಶಿಕ್ಷಣವನ್ನು ಪಡೆಯುವಾಗ ಸಾಕಷ್ಟು ಯಾತನೆ ಅನುಭವಿಸಿದ್ದು, ರಾಷ್ಟ್ರಕ್ಕಾಗಿ ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದೆ. ಭಾರತೀಯರ ಬದುಕಿನ ಬವಣೆ ಹೋಗಲಾಡಿಸಲು ಹಲವು ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಹಸಿವುಮುಕ್ತ ಭಾರತ ಮಾಡಲು ನಾಂದಿ ಹಾಡಿದರು ಎಂದು ತಿಳಿಸಿದರು.
ಜಯಂತಿಯನ್ನು ಆಚರಣೆ ಮಾಡುವಾಗ ಅವರ ಜೀವನದ ಬವಣೆಯನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು, ಅವರ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್‌ವಾದಿ ರಘೋತ್ತಮ್ ಮಾತನಾಡಿದರು. ನಂತರ ಡಾ.ಅಂಬೇಡ್ಕರ್ ಪುತ್ಥಳಿಯನ್ನು ಮೆರವಣಿಗೆ ಮಾಡಲಾಯಿತು. ಜಾನಪದ ಕಲಾ ತಂಡಗಳು ಮೆರವಣಿಗೆಯ ಮೆರಗು ನೀಡಿದವು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಹದೇವಮ್ಮ, ಅಂಬೇಡ್ಕರ್ ಸಂಘದ ಅಧ್ಯಕ್ಷ ಗೋವರ್ಧನ, ಮಲ್ಲೇಶ್, ಸಾಗರ್, ಹರ್ಷ, ಶಿವಣ್ಣ, ಶಿವಮೂರ್ತಿ, ಮಹೇಶ್, ಲೋಕೇಶ್, ಸುಪ್ರಿಯಾ ಇದ್ದರು.