ತಿ.ನರಸೀಪುರ ತಾಲೂಕಿನ ತಲಕಾಡು ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ರೇಂಜರ್ಸ್ ಹಾಗೂ ರೋವರ್ಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಪ್ರೊ.ನಂಜುಂಡಸ್ವಾಮಿ, ಅರುಣಕುಮಾರ್, ಡಾ.ಎಂ.ಮಹದೇವ ಪ್ರಭು, ಪ್ರಸನ್ನ, ನರಸಿಂಹ ಮಾದನಾಯಕ, ಆರ್.ಚಲುವರಾಜು ಇತರರು ಇದ್ದರು. 
ಮೈಸೂರು

ವಿದ್ಯಾರ್ಥಿಗಳು ಜೀವನ ಕೌಶಲ ಬೆಳೆಸಿಕೊಳ್ಳಲಿ

ಲೋಕೇಶ್ ಮನು. ಡಿ
ತಿ.ನರಸೀಪುರ: ಕಲಿಕೆ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳಿಗಿಂತಲೂ ಹೆಚ್ಚಾಗಿ ಜೀವನ ಕೌಶಲಗಳನ್ನು ಬೆಳೆಸಬೇಕು ಎಂದು ಬೈರಾಪುರ ಮಹಿಳಾ ಸರ್ಕಾರಿ ಪದವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ತಲಕಾಡು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 2026-27ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್, ರೇಂಜರ್ಸ್ ಹಾಗೂ ರೋವರ್ಸ್ ಘಟಕಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಮಹದೇವ ಪ್ರಭು ಮಾತನಾಡಿ, ವಿದ್ಯಾರ್ಥಿಗಳು ವಿವಿಧ ಕಲಾ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಆಲಿಸುವ ಕಿವಿಯಿದ್ದರೆ ವ್ಯಕ್ತಿತ್ವ ಬೆಳೆಯುತ್ತದೆ ಎಂದರು.
ಕಲಾವಿದ, ಚಾ.ನಗರ ಜಿಲ್ಲಾ ಕನ್ನಡ ಅಭಿವೃದ್ಧಿ ಜಾಗೃತಿ ಸಮಿತಿ ಸದಸ್ಯ ಅರುಣಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಪ್ರಸನ್ನ , ಸಾಂಸ್ಕೃತಿಕ ಸಮಿತಿಯ ಸಂಚಾಲಕ ಆರ್.ಚಲುವರಾಜು, ಸಮಿತಿಯ ಸದಸ್ಯ ನರಸಿಂಹ ಮಾದನಾಯಕ ಮಾತನಾಡಿದರು.
ಐಕ್ಯೂಎಸಿ ಘಟಕದ ಸಂಚಾಲಕ ಡಾ.ಡಿ.ಹರೀಶ್, ಯುವ ರೆಡ್ ಕ್ರಾಸ್ ಸಮಿತಿಯ ಸಂಚಾಲಕ ಡಾ.ಪಿ.ಶೇಖರ, ರೋವರ್ಸ್ ಘಟಕದ ಸಂಚಾಲಕ ನವೀನ್ ರಾವ್, ರಾಜ್ಯಶಾಸ್ತ್ರವಿಭಾಗದ ಮುಖ್ಯಸ್ಥೆ ಮಹದೇವಮ್ಮ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಎಸ್.ರವಿಕುಮಾರ್, ಕ್ರೀಡಾ ವಿಭಾಗದ ಸಂಚಾಲಕ ವಿ.ಚಂದ್ರು, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಎಸ್.ಮಹೇಶ್, ಅತಿಥಿ ಉಪನ್ಯಾಸಕರಾದ ಆರ್.ನವೀನ್ ಕುಮಾರ್, ಮಹಮ್ಮದ್ ಮುಸ್ತಫ, ಎಚ್.ಸಿ.ನಟರಾಜ್ , ಕೋಮಲಾ, ಅಧೀಕ್ಷಕ ರಮೇಶ್ ಸಿಬ್ಬಂದಿ ತೇಜೋಮೂರ್ತಿ, ಮಹೇಶ್, ಜಯಲಕ್ಷ್ಮೀ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.