ಕೆ.ಆರ್.ನಗರದಲ್ಲಿ ಟೈಮ್ಸ್ ಅಸೋಸಿಯೇಟ್ಸ್-ತೇಜಸ್ವಿ ತಪೋವನ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಚಿಂತಕರ ಸಭೆಯಲ್ಲಿ ಖ್ಯಾತ ಮೂಳೆ ತಜ್ಞ ಜೀವಾ ಆರ್ಥೋಕೇರ್‌ನ ಮುಖ್ಯಸ್ಥ ಡಾ.ಕೆ.ಆರ್.ಗೌತಮ್, ಪತ್ರಕರ್ತರಾದ ರಾ.ಸುರೇಶ್, ರಾಜೇಂದ್ರ, ಎಂ.ಎಸ್.ರವಿಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೃಷ್ಣಯ್ಯ, ಪಿ.ಗುರುಪ್ರಸಾದ್, ನಾಗರಾಜೇಗೌಡ ಇದ್ದರು.
ಖಾತ ಮೂಳೆ ತಜ್ಞ ಡಾ.ಕೆ.ಆರ್.ಗೌತಮ್ ಕರೆ
ಕೆ.ಆರ್.ನಗರ: ಕಾಲ ಮತ್ತು ವರ್ಷಗಳು ಉರುಳಿದಂತೆ ಮನುಷ್ಯ ತನ್ನ ವ್ಯಕ್ತಿತ್ವ ಬದಲಾವಣೆಯೊಂದಿಗೆ ಸಮಾಜದ ಸುಧಾರಣೆಗೆ ಮತ್ತು ಸಾಧನೆಗೆ ಮುಂದಾಗಬೇಕೆಂದು ಖ್ಯಾತ ಮೂಳೆ ತಜ್ಞ ಜೀವಾ ಆರ್ಥೋಕೇರ್‌ನ ಮುಖ್ಯಸ್ಥ ಡಾ.ಕೆ.ಆರ್.ಗೌತಮ್ ಹೇಳಿದರು.
ಟೈಮ್ಸ್ ಅಸೋಸಿಯೇಟ್ಸ್, ತೇಜಸ್ವಿ ತಪೋವನ ಸಂಸ್ಥೆ ವತಿಯಿಂದ ಪಟ್ಟಣದ ಅಕ್ಷತಾ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಚಿಂತಕರ ಸಭೆ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಬದಲಾವಣೆಯೊಂದಿಗೆ ಸಮಾಜದ ಸುಧಾರಣೆಗೆ ತನ್ನದೇ ಆದ ಕೊಡುಗೆ ನೀಡಿ ತಾನೂ ಒಳ್ಳೆಯವನಾಗಿ ತನ್ನ ಸುತ್ತಲೂ ಇರುವವರನ್ನು ಒಳ್ಳೆಯವರನ್ನಾಗಿ ಮಾಡುವಂತಾದಾಗ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ದ್ವೇಷಾಸೂಯೆಯನ್ನು ಮರೆತು ಎಲ್ಲರೂ ನನ್ನವರು ಎಂದು ಅರಿತು ಒಳ್ಳೆಯದನ್ನು ಮಾಡುವವರಿಗೆ ಪ್ರೋತ್ಸಾಹಿಸುತ್ತಾ ಉತ್ತಮ ಕೆಲಸಗಳನ್ನು ಮಾಡುತ್ತಾ ಕೆಟ್ಟ ಕೆಲಸ ಮಾಡುವವರನ್ನು ತಿದ್ದುತ್ತಾ ಇರಲು ಸಾಧ್ಯವಾಗದಿದ್ದರೆ ಅವರಿಂದ ದೂರವಿದ್ದು ಜೀವನದ ಸತ್ಯವನ್ನು ಅರಿತು ಬದುಕು ನಡೆಸಬೇಕೆಂದರು.
ತೇಜಸ್ವಿ ತಪೋವನ ಸಂಸ್ಥೆಯ ಅಧ್ಯಕ್ಷ ಕೃಷ್ಣಯ್ಯ, ಉಪಾಧ್ಯಕ್ಷ ಸ್ವಾಮಿಗೌಡ, ಟೈಮ್ಸ್ ಅಸೋಸಿಯೇಟ್ಸ್‌ನ ಮುಖ್ಯಸ್ಥ ಪಿ.ಗುರುಪ್ರಸಾದ್, ಹಿರಿಯ ಸಲಹೆಗಾರ ನಾಗರಾಜೇಗೌಡ ಮಾತನಾಡಿದರು.
ಖ್ಯಾತ ಮೂಳೆ ತಜ್ಞ ಜೀವಾ ಆರ್ಥೋಕೇರ್‌ನ ಮುಖ್ಯಸ್ಥ ಡಾ.ಕೆ.ಆರ್.ಗೌತಮ್, ಪತ್ರಕರ್ತರಾದ ರಾ.ಸುರೇಶ್, ರಾಜೇಂದ್ರ, ಎಂ.ಎಸ್.ರವಿಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಮುಖಂಡ ಕೆಂಪಯ್ಯ, ಕೆ.ಆರ್.ನಗರ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಂಚಿಮಂಜು, ಮುಖಂಡರಾದ ಮನು, ಅರಕೆರೆ ಮಧು, ಶರತ್, ಜಗದೀಶ್, ದಯಾನಂದ್, ಗಣೇಶ್, ನಟರಾಜ್, ಪ್ರವೀಣ್ ಶಿವಾಜಿ ಮತ್ತಿತರರು ಹಾಜರಿದ್ದರು.