ನಂಜನಗೂಡು ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ರೈತ ಕಲ್ಯಾಣ ಸಂಘದ ಗ್ರಾಮ ಘಟಕವನ್ನು ರಾಜ್ಯ ಅಧ್ಯಕ್ಷ ಚಂದನ್ ಗೌಡ ಉದ್ಘಾಟಿಸಿದರು. ಬಿ.ಎನ್.ಸದಾನಂದ, ಹೇಮಂತ್ ಗೌಡ, ಹರೀಶ್ ಗೌಡ, ಕಣೆನೂರು ಜಗದೀಶ್ ಮತ್ತಿತರರು ಇದ್ದರು.
ನಂಜನಗೂಡು: ರೈತರು ಕೇವಲ ಕೃಷಿ ಮಾಡಿದರೆ ಲಾಭ ಸಿಗುವುದಿಲ್ಲ. ಕೃಷಿಯ ಜತೆಗೆ ಉದ್ಯಮಿಗಳಾಗಿ ಬದಲಾವಣೆ ಹೊಂದಬೇಕು ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಚಂದನ ಗೌಡ ಸಲಹೆ ನೀಡಿದರು.
ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ರಾಜಕಾರಣಿಗಳನ್ನು ನೋಡಿದರೆ, ಅಂದಿನ ಕಾಲದ ಬ್ರಿಟಿಷರ ಆಳ್ವಿಕೆ ಚೆನ್ನಾಗಿತ್ತು. ಪ್ರತಿದಿನ ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ರೈತರಿಗೆ ಮುಂದೆ ಒಳ್ಳೆಯ ಕಾಲ ಬಂದೇ ಬರುತ್ತದೆ. ದೇಶದ ಆಸ್ತಿ ಎಂದರೆ ಅದು ರೈತ ಮಾತ್ರ. ಇತ್ತೀಚೆಗೆ ರೈತರು ಮಣ್ಣಿನ ಮಹತ್ವ ಮರೆತಿದ್ದಾರೆ. ಜಾಗತಿಕ ತಾಪಮಾನ ದಿನ ಹೆಚ್ಚುತ್ತಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆ ಸಾವಯವ ಕೃಷಿ ಮೂಲಕ ಬೆಳೆ ಬೆಳೆಯಬೇಕು ಎಂದು ಹೇಳಿದರು.
ಮೈಸೂರು ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೇಮಂತ್ ಗೌಡ, ಹರೀಶ್ ಗೌಡ, ಕಣೇನೂರು ಜಗದೀಶ್, ಉಷಾ ಮಂಚಯ್ಯ, ಗಿರೀಶ್, ಯುತ್ ಕಾಂಗ್ರೆಸ್ ಅಧ್ಯಕ್ಷ ಚಂದನ್ ಗೌಡ, ರವಿಕುಮಾರ್, ಪುನೀತ್ ದೇಬೂರು, ಅಪ್ಪು, ಮಂಜು, ಮೋಹನ್ ಗೌಡ, ಪ್ರಕಾಶ್, ಜಯರಾಮ್, ಮಹದೇವ ಹಾಜರಿದ್ದರು.