ಬದನವಾಳು ಗ್ರಾಮದಲ್ಲಿ ಆಯೋಜಿಸಿದ್ದ ಸಿದ್ದಪ್ಪಾಜಿ ಅವರ ಮಹಾಕಾವ್ಯ ಮತ್ತು ಗೀತಾ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು. ದ್ಡೊಡ್ಡಸಿದ್ದಯ್ಯ, ಮಹದೇವ್, ಅವಿನಾಶ್, ನಾಗೇಶ್‌ಮೂರ್ತಿ, ಲಕ್ಷ್ಮೀನಾರಾಯಣ, ಗುರುಸ್ವಾಮಿ ಇತರರಿದ್ದರು.
- ಬದನವಾಳು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದ್ಡೊಡ್ಡಸಿದ್ದಯ್ಯ
- ಬದನವಾಳು ಗ್ರಾಮ
ನಂಜನಗೂಡು: ಜನಪದ ಕಲೆಗಳಿಂದ ಮನುಷ್ಯನಿಗೆ ಮಾನಸಿಕ ನೆಮ್ಮದಿ ಜತೆಗೆ ಉತ್ತಮ ಆರೋಗ್ಯ ದೊರೆಯುವುದರಿಂದ ಜನಪದ ಕಲೆಗಳ ಉಳಿವಿಗೆ ಶ್ರಮಿಸಬೇಕು ಎಂದು ಬದನವಾಳು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದ್ಡೊಡ್ಡಸಿದ್ದಯ್ಯ ಸಲಹೆ ನೀಡಿದರು.
ತಾಲೂಕಿನ ಬದನವಾಳು ಗ್ರಾಮದಲ್ಲಿ ಮಂಗಳವಾರ ಶ್ರೀ ಬಿಳಿಗಿರಿರಂಗಸ್ವಾಮಿ ಸಾಂಸ್ಕೃತಿಕ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಸಿದ್ದಪ್ಪಾಜಿ ಅವರ ಮಹಾಕಾವ್ಯ ಮತ್ತು ಗೀತಾ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಿರಂತರವಾಗಿ ಜನಪದ ಕಲೆಗಳ ಪ್ರದರ್ಶನ ನಡೆಯುವುದರಿಂದ ಭಾಷೆಯ ಪರಂಪರೆ ಹಾಗೂ ಕಲೆಗಳನ್ನು ಉಳಿಸಿದಂತಾಗುತ್ತದೆ ಎಂದರು.
ಕಲೆಗಳಿಗೆ ಜೀವ ತುಂಬುವ ಕಾರ್ಯ ಕಲಾವಿದರಲ್ಲಿ ಸಾರ್ಥಕ ಬದುಕನ್ನು ರೂಪಿಸುತ್ತದೆ. ನಮ್ಮ ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಅವರ ಕುಟುಂಬ ವ್ಯವಸ್ಥೆಯ ಮೂಲಕ ಆಗುತ್ತದೆ. ಇಂತಹ ಜನಪದ ಸಾಂಸ್ಕೃತಿಕ ಅಭಿವ್ಯಕ್ತಿಗಳು ನಮ್ಮ ಪರಂಪರೆಯನ್ನು ಸದೃಢವಾಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಪ್ಪಾಜಿಯ ಮಹಾಕಾವ್ಯ ಮತ್ತು ಗೀತಗಾಯನ ಗಮನ ಸೆಳೆಯಿತು. ಗ್ರಾಪಂ ಮಾಜಿ ಸದಸ್ಯರಾದ ಮಹದೇವ್, ಅವಿನಾಶ್, ಶ್ರೀ ಬಿಳಿಗಿರಿ ರಂಗಸ್ವಾಮಿ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ನಾಗೇಶ್‌ಮೂರ್ತಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ಕಾಂಗ್ರೆಸ್ ಮುಖಂಡ ಸೋಮಣ್ಣ, ಪ್ರಶಾಂತ್, ಗಾಯಕ ರಾಜೇಂದ್ರ ಪ್ರಸಾದ್, ಎ ಗ್ರೇಡ್ ಕಲಾವಿದರಾದ ಕೆಂಪ ನಾಯಕ, ತಬಲ ಉಮೇಶ್, ಮಲ್ಲೇಶ್, ಶಿವರಾಜು, ಮಹದೇವ ಪ್ರಸಾದ್ ಪುಟ್ಟರಾಜು, ಶ್ರೀನಿವಾಸ ಮೂರ್ತಿ, ಕೀ ಬೋರ್ಡ್ ಮಾದೇಶ್ ಇತರರಿದ್ದರು.