ಎಚ್.ಡಿ. ಕೋಟೆ ತಾಲೂಕಿನ ಗಡಿಭಾಗದ ಬಾವಲಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸೋಮಣ್ಣ ಸುಬ್ರಹ್ಮಣ್ಯ, ಡಾ.ಅಮ್ಮಸಂದ್ರ ಸುರೇಶ್, ನಂದಿನಿ, ಪ್ರೇಮ್ ಸಾಗರ್, ಪುಟ್ಟಣ್ಣ, ಶಿವಲಿಂಗ, ವಿದ್ಯಾರ್ಥಿಗಳು ಭಾಗವಹಿಸಿದರು. 
ಮೈಸೂರು

ಪ್ರತಿಯೊಬ್ಬರು ಕನ್ನಡ ಭಾಷಾಭಿಮಾನ ಬೆಳಸಿಕೊಳ್ಳಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಗಿರಿಜನ ಮುಖಂಡ ಸೋಮಣ್ಣ ಹೇಳಿಕೆ
ಎಚ್.ಡಿ.ಕೋಟೆ : ಕನ್ನಡ ಭಾಷಾಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಗಿರಿಜನ ಮುಖಂಡ ಸೋಮಣ್ಣ ತಿಳಿಸಿದರು.
ತಾಲೂಕಿನ ಗಡಿಭಾಗ ಪ್ರದೇಶವಾದ ಬಾವಲಿ ಗ್ರಾಮದಲ್ಲಿ ಚೈತನ್ಯ ಭಾರತಿ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡ ನುಡಿ ಭಾಷೆ ಬಗ್ಗೆ ಯುವಕರಿಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಬೇಕಾಗಿದೆ,
ಗಡಿ ಭಾಗದಲ್ಲಿ ವಾಸಿಸುತ್ತಿರುವ ಗಿರಿ ಜನರು ಸೇರಿದಂತೆ ಇತರೆ ವರ್ಗದವರಿಗೆ, ಹಕ್ಕು ಪತ್ರ ನಿವೇಶನ ಸೇರಿದಂತೆ ಈ ವಿಷಯವಾಗಿ ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಹೋರಾಟಗಳನ್ನ ನಡೆಸುತ್ತಾ ಬಂದಿದ್ದಾರೆ. ಸರ್ಕಾರ ಇವರಿಗೆ ಮೂಲ ಸೌಕರ್ಯಗಳನ್ನ ಒದಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಶಾಸಕ ಅನಿಲ್ ಚಿಕ್ಕಮಾದು ಅವರ ಪತ್ನಿ ಸೌಮ್ಯ ಮಾತನಾಡಿ, ನಮ್ಮ ಕನ್ನಡ ಭಾಷೆ ಶ್ರೀಮಂತ ಭಾಷೆ ಆಗಿದ್ದು,
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಬಳಕೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕನ್ನಡ ಶಾಲೆಗಳು ನಶಿಸುತ್ತಿದ್ದು, ಆಂಗ್ಲ ಮಾಧ್ಯಮದ ಶಾಲೆಗಳ ಮೇಲೆ ಪಾಲಕರ ವ್ಯಾಮೋಹ ಹೆಚ್ಚಾಗುತ್ತಿರುವುದೆ. ಮಕ್ಕಳಲ್ಲಿ ನೆಲೆ.ಜಲ, ಭಾಷೆಯ ಮಹತ್ವವನ್ನು ತಿಳಿಸಬೇಕಾಗಿದೆ ಎಂದರು.
ಗಡಿ ಭಾಗದ ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಇಲ್ಲಿನ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಕಳೆದ ಮೂರು ವರ್ಷಗಳಿಂದ ಗಡಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುತ್ತಿರುವುದು ಔಚಿತ್ಯ ಪೂರ್ಣವಾಗಿದೆ ಎಂದರು.
ಭುವನೇಶ್ವರಿ ಭಾವಚಿತ್ರದೊಂದಿಗೆ ಶಾಲಾ ಮಕ್ಕಳು ಸುಮಾರು 400 ಅಡಿ ಉದ್ದದ ಕನ್ನಡ ಬಾವುಟ ದೊಂದಿಗೆ ಮೆರವಣಿಗೆಯಲ್ಲಿ ಸಾಗಿ ವೇದಿಕೆಯಲ್ಲಿ ಸಮಾವೇಶಗೊಂಡಿತು.ಕನ್ನಡ ರಾಜ್ಯೋತ್ಸವದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.
ಬಾವಲಿ ಗಡಿನಾಡ ಸಾಧಕರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರತಿಭಾ,ಹಾಗು ಯೋಗ ಪಟುಗಳಾದ, ಸೂರ್ಯ, ಹರ್ಷಿತಾ, ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತರನ್ನ ಅಭಿನಂದಿಸಲಾಯಿತು.
ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ರಹ್ಮಣ್ಯ, ಲೇಖಕ ಡಾ.ಅಮ್ಮಸಂದ್ರ ಸುರೇಶ್, ಚೈತನ್ಯಾ ಭಾರತಿ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್ ನ ನಂದಿನಿ, ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಲೋಚಕಿ ಜಶೀಲಾ, ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಗೌಡ, ಮುಖಂಡರಾದ ಪ್ರೇಮ್ ಸಾಗರ್, ಪುಟ್ಟಣ್ಣ, ಶಿವಲಿಂಗ, ಮಹೇಶ್, ರವಿ, ಚಂದನ್, ರಾಜ್ ಕುಮಾರ್, ಸವಿತಾ, ಪುಷ್ಪಾ ಇದ್ದರು.