ಬೆಟ್ಟದಪುರದ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ ಮಾತನಾಡಿದರು. 
ಮೈಸೂರು

ಚಿಕಿತ್ಸೆಯಿಂದ ಕುಷ್ಠರೋಗ ಗುಣ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ಎಚ್.ಎಸ್.ರವಿ ಹೇಳಿಕೆ
ಬೆಟ್ಟದಪುರ: ಕುಷ್ಠರೋಗವು ಒಂದು ಕಾಯಿಲೆಯೇ ಹೊರತು ಶಾಪವಲ್ಲ. ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಡಾ. ಎಚ್.ಎಸ್.ರವಿ  ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2026ರ ಘೋಷ ವಾಕ್ಯವಾದ ತಾರತಮ್ಯವನ್ನು ಕೊನೆಯಾಗಿಸೋಣ, ಘನತೆಯನ್ನು ಕಾಪಾಡೋಣ ಎಂಬಂತೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2026 ಅಡಿಯಲ್ಲಿ ವಿಶೇಷ ಅರಿವು ಮೂಡಿಸಲಾಗುತ್ತಿದೆ. ದೇಹದ ಮೇಲೆ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕಂಡುಬಂದಲ್ಲಿ, ಗಂಟುಗಳು ಅಥವಾ ಚರ್ಮದ ದಪ್ಪನೆಯ ಪ್ರತಿಕ್ರಿಯೆಗಳು ಕಂಡರೆ ತಡಮಾಡದೆ ಕೂಡಲೇ, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್. ಸಂದೀಪ್ , ಆರೋಗ್ಯ ಸುರಕ್ಷಣಾಧಿಕಾರಿ ಚೈತ್ರಾ, ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಇದ್ದರು.