ಚಿರತೆ  
ಮೈಸೂರು

ಮಡಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಚಿರತೆ ಮರದಿಂದ ಕೆಳಗಿಳಿದು ಓಡಿಹೋದ ದೃಶ್ಯವನ್ನು ಕಂಡು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಗ್ರಾಮದ ಸಮೀಪದ ಜಮೀನು ಹೊಂದಿರುವ ಕೇರಳ ಮೂಲದ ವ್ಯಕ್ತಿಯೊಬ್ಬರು ಕಾರ್ಮಿಕರ ಜತೆ ಜಮೀನಿಗೆ ಹೋಗಿದ್ದಾಗ ಎತ್ತರದ ಮರದ ಮೇಲೆ ಕುಳಿತಿದ್ದ ಚಿರತೆ ಜನರ ಗದ್ದಲದಿಂದ ಕೆಳಗಿಳಿದು ಓಡುತ್ತಿರುವ ವಿಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಗ್ರಾಮದ ಸಮೀಪವೇ ಚಿರತೆ ಓಡಾಡುತ್ತಿರುವುದು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಚಿರತೆ ಪತ್ತೆಗೆ ಕೂಂಬಿಂಗ್ ನಡೆಸಿದರು. ಚಿರತೆ ಮತ್ತೊಮ್ಮೆ ಕಾಣಿಸಿಕೊಂಡರೆ ಅದರ ಸೆರೆಗೆ ಬೋನು ಇರಿಸಲಾಗುವುದು ಎಂದು ಬಫರ್ ವಲಯದ ಪ್ರಭಾರ ಅರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.